ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಂಗಳೂರಿನಲ್ಲಿ ನಡೆದ ವೋಟರ್ ಐಡಿ ಅಕ್ರಮದ ಬೆನ್ನಲ್ಲೇ ರಾಜ್ಯಾದ್ಯಂತ ಕ್ಷೇತ್ರವಾರು ಜನಪ್ರತಿನಿಧಿಗಳು ಎಚ್ಚತ್ತುಕೊಂಡಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ನನ್ನ ಕ್ಷೇತ್ರದಲ್ಲಿ ಯಾವುದೇ ಅಕ್ರಮದ ಬಗ್ಗೆ ಮಾಹಿತಿ ಇಲ್ಲ. ನಾನೇ ಖುದ್ದಾಗಿ ತಹಶೀಲ್ದಾರ್ ಅವರಿಂದ ನಾಲ್ಕು ದಿನಕ್ಕೊಮ್ಮೆ ಅಪ್ ಡೇಟ್ಸ್ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಒಂದೊಂದು ಕ್ಷೇತ್ರದಲ್ಲಿ 30-40 ಸಾವಿರ ಮತಗಳನ್ನು ಡಿಲಿಟ್ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅಲ್ಲದೇ ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷದ ಕುಟುಂಬದಲ್ಲಿ 8 ಮತಗಳಿದ್ದರೆ 8 ಮತಗಳನ್ನು ಒಂದೊಂದು ಬೂತ್ ಗೆ ಹಂಚಿಕೆ ಮಾಡಿ ಒಡೆಯುವುದು ಈರಿತಿ ಬಹಳ ಬುದ್ಧಿವಂತಿಕೆಯಿಂದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆಸಿದ್ದಾರೆ. ಏನೇ ಅಕ್ರಮ ಮಾಡಿದರೂ ಮೇಲೊಬ್ಬ ನೋಡುವವನು ಇರುತ್ತಾನೆ ಎಂದು ತಿರುಗೇಟು ನೀಡಿದರು.
BJP ತೊರೆಯಲಿದ್ದಾರಾ ರಮೇಶ್ ಜಾರಕಿಹೊಳಿ?; ಮಾಜಿ ಸಚಿವರು ನೀಡಿದ ಸ್ಪಷ್ಟನೆಯೇನು?
https://pragati.taskdun.com/ramesh-jarakiholiclarificationjds-joining/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ