ಪ್ರಗತಿವಾಹಿನಿ ಸುದ್ದಿ, ಚಿಕ್ಕಬಳ್ಳಾಪುರ: ಇಲ್ಲಿನ ಒಂದೇ ಕುಟುಂಬದ 65 ಜನ ಸದಸ್ಯರು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಬಾದಾಮ್ ಕುಟುಂಬ ದೊಡ್ಡ ಪರಿವಾರವಾಗಿದ್ದು ಇದರಲ್ಲಿ 65 ಜನ ಮತದಾರರಿದ್ದಾರೆ. ಇವರೆಲ್ಲರೂ ಸೇರಿ ಇಂದು ಮತದಾನ ಮಾಡಿದ್ದಾರೆ.
ಪ್ರತಿ ಚುನಾವಣೆಯಲ್ಲೂ ತಪ್ಪದೆ ಪರಮಾಧಿಕಾರ ಚಲಾಯಿಸುವ ಈ ಕುಟುಂಬ ಕಳೆದ 15 ಚುನಾವಣೆಗಳಲ್ಲಿ ಒಟ್ಟಿಗೇ ಮತ ಚಲಾಯಿಸಿದೆ. “ಇನ್ನು ಮುಂದೆಯೂ ಎಲ್ಲ ಚುನಾವಣೆಗಳಲ್ಲಿ ಒಟ್ಟಿಗೇ ಮತ ಚಲಾಯಿಸಲಿದ್ದೇವೆ.” ಎಂದು ಕುಟುಂಬದ ಸದಸ್ಯ ಗೋಪಾಲಕೃಷ್ಣ ಅವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ