Kannada NewsKarnataka NewsLatest

ಹುಕ್ಕೇರಿ, ಯಮಕನಮರಡಿ ಕ್ಷೇತ್ರಗಳಲ್ಲಿ ತುರುಸಿನ ಮತದಾನ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: ರಾಜ್ಯ ವಿಧಾನಸಭಾ ಚುನಾವಣೆಗೆ ಹುಕ್ಕೇರಿ ಹಾಗೂ ಯಮಕನಮರಡಿ ಕ್ಷೇತ್ರಗಳಲ್ಲಿ ತುರುಸಿನ ಮತದಾನ ನಡೆದಿದೆ.

ಉಭಯ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಘಂಟೆಗೆ ಮತದಾನ ಆರಂಭಗೊಳ್ಳುತ್ತಿದ್ದಂತೆ ಮತಗಟ್ಟೆಗಳತ್ತ ಹೆಜ್ಜೆ ಹಾಕುವವರ ಸಂಖ್ಯೆಯೂ ಹೆಚ್ಚಿತ್ತು. ಬೆಳಗ್ಗೆ 10 ಗಂಟೆಯಷ್ಟರ ವೇಳೆಗೇ ಅನೇಕ ರಾಜಕೀಯ, ಧಾರ್ಮಿಕ ಮುಖಂಡರು ಹಾಗೂ ಪ್ರಮುಖರು ಪರಮಾಧಿಕಾರ ಚಲಾಯಿಸಿ ಇತರರಿಗೂ ಪ್ರೇರಣಾತ್ಮಕ ಕರೆಗಳನ್ನು ನೀಡಿ ಮತದಾನಕ್ಕೆ ಪ್ರೋತ್ಸಾಹಿಸಿದರು.

ಹುಕ್ಕೇರಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಿಖಿಲ್ ಕತ್ತಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎ.ಬಿ. ಪಾಟೀಲ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಅದರಂತೆ ಯಮಕನಮರಡಿ ಕ್ಷೇತ್ರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ, ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ, ಮತ್ತು ಜೆಡಿಎಸ್ ಅಭ್ಯರ್ಥಿ ಮಾರುತಿ ಅಷ್ಟಗಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಅನೇಕ ಮಹಿಳಾ ಮತದಾರರು ವಿಶೇಷವಾಗಿ ತೆರೆಯಲಾದ ಪಿಂಕ್ ಮತಗಟ್ಟೆಗಳಲ್ಲಿ ಮತದಾನ ಮಾಡಿ ಖುಷಿಪಟ್ಟರು. ವಿಕಲಚೇತನರು ಹಾಗೂ ವೃದ್ಧರಿಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ನೆರವಾಗುತ್ತಿದ್ದ ದೃಶ್ಯಗಳು ಕಂಡುಬಂದವು.

ಮತದಾನ ಶಾಂತಿಯುತವಾಗಿ ನಡೆದಿದ್ದು, ಹುಕ್ಕೇರಿ ಕ್ಷೇತ್ರದ ಎಲ್ಲ 224 ಬೂತ್ ಗಳಲ್ಲಿ ಮತದಾರರು ನಿರೀಕ್ಷಿತ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡುತ್ತಿದ್ದಾರೆ ಎಂದು ಚುನಾವಣಾ ಅಧಿಕಾರಿ ಡಾ. ವಿಜಯಕುಮಾರ ಅಜೂರೆ ತಿಳಿಸಿದರು. ತಹಸಿಲ್ದಾರ್ ಸಂಜಯ ಇಂಗಳೆ, ಪ್ರೊಬೇಷ್ನರಿ ತಹಸಿಲ್ದಾರ್ ಫಿರೋಜ್ ಶಾ ಸೋಮನಕಟ್ಟಿ ಮುಂತಾದವರು ಕರ್ತವ್ಯನಿರತರಾಗಿದ್ದಾರೆ.

https://pragati.taskdun.com/khanapuraanjali-nimbalkarbjp-activistpoling-booth/
https://pragati.taskdun.com/bangalorepadmanabhanagarapapaih-gardenpoling-boothclash/
https://pragati.taskdun.com/karnataka-vidhanasabha-electionvotingstartmla-lakshmi-hebbalkar-voting/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button