ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಖಿಲ ಕರ್ನಾಟಕ ಜೈನ ಅಲ್ಪ ಸಂಖ್ಯಾತರ ಸಂಘದ ವತಿಯಿಂದ ಸಮಾಜ ಸೇವೆ ವಿಭಾಗದಲ್ಲಿ ಪ್ರತಿ ವರ್ಷ ನೀಡಲಾಗುವ ರಾಜ್ಯಮಟ್ಟದ “ವೃಷಭಶ್ರೀ” ಮತ್ತು ಬ್ರಾಹ್ಮಿಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಬೆಳಗಾವಿಯ ಹಿರಿಯ ಪತ್ರಕರ್ತ ಕುಂತಿನಾಥ ಕಲಮನಿ ಅವರಿಗೆ “ವೃಷಭಶ್ರೀ” ಪ್ರಶಸ್ತಿ ಮತ್ತು ಬೆಂಗಳೂರಿನ ರತ್ನತ್ರಯ ಕ್ರಿಯೇಶನ್ಸ್‌ನ ಡಾ.ನೀರಜಾ ನಾಗೇಂದ್ರಕುಮಾರ ಅವರಿಗೆ “ಬ್ರಾಹ್ಮಿಶ್ರೀ”ಪ್ರಶಸ್ತಿ ನೀಡಲಾಗಿದೆ.
ಆದರ್ಶ ಶಿಕ್ಷಕ ಪ್ರಶಸ್ತಿ ಆಯ್ಕೆ ಸಮಿತಿ ಚಾರ್ತುಮಾಸ ಕಮಿಟಿ ಹಾಗೂ ಶ್ರೀ ಜಯಕೀರ್ತಿ ವಿದ್ಯಾಲಯ ಗರಗ ಇವರ ಸಹಯೋಗದಲ್ಲಿ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ಸೆ. 12 ರಂದು ಆಚಾರ್ಯ ಶ್ರೀ 108 ಜ್ಞಾನೇಶ್ವರ ಮುನಿ ಮಹಾರಾಜರ ಸಾನಿಧ್ಯದಲ್ಲಿ ನಡೆಯಲಿರುವ ಬೆಳಗಾವಿ ವಿಭಾಗೀಯ 9 ನೇ ಜೈನ ಶಿಕ್ಷಕರ ಸಮಾವೇಶ -2021 ಹಾಗೂ ಶ್ರೀ. ಜ್ಞಾನೇಶ್ವರ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ನೀಡಿ ಗೌರವಿಸಲಾಗುವುದು.
ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಉಪನ್ಯಾಸಕಾರದ ಡಾ. ನಾಗರಾಜ ಮರೆಣ್ಣವರ ಅವರು ವಹಿಸಲಿದ್ದು, ಧಾರವಾಡ ಗ್ರಾಮೀಣ ಮತಕ್ಷೇತ್ರದ ಮಾಜಿ ಶಾಸಕ ಎ.ಬಿ.ದೇಸಾಯಿ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಬಿಎಓ ಚಿಕ್ಕೋಡಿ ಬಿ..ಎ.ಮೆಕಲಮರಡಿ , ವಿಶೇಷ ಆಹ್ವಾನಿತರಾಗಿ ಎಚ.ಪಿ.ಮೋಹನಕುಮಾರ ಶಾಸ್ತ್ರೀ , ಜಿ.ಪಂ.ಸದಸ್ಯ ಟಿ.ಪಿ.ಅಷ್ಟಗಿ , ಮುಖ್ಯಅತಿಥಿಗಳಾಗಿ ಮಹಾದೇವ ಪಟಗುಂದಿ, ಅಮೃತ ಕುಡಚಿ, ಜಯಕೀರ್ತಿ ವಿದ್ಯಾಲಯದ ಅಧ್ಯಕ್ಷರಾದ ಸುದರ್ಶನ ಆರ್ ದಿಂಡಲಕೊಪ್ಪ , ಚಾರ್ತುಮಾಸ ಕಮಿಟಿಯ ಅಧ್ಯಕ್ಷರಾದ ಸುದರ್ಶನ ಬಿ,.ದಿಂಡಲಕೊಪ್ಪ ಹಾಗೂ ಅತಿಥಿ ಉಪನ್ಯಾಸಕರಾಗಿ ಪಿ.ಜಿ.ಕೆಂಪಣ್ಣವರ ಅವರು ಆಗಮಿಲಿದ್ದಾರೆ.
ಗಾಣಿಗ ಸಮುದಾಯ ಅಭಿವೃದ್ಧಿಗೆ ಎಲ್ಲ ಸಹಕಾರ -ಲಕ್ಷ್ಮಿ ಹೆಬ್ಬಾಳಕರ್ ಭರವಸೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ