ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ೨೦ನೇ ವಾರ್ಷಿಕ ಘಟಿಕೋತ್ಸವ ಶನಿವಾರ ನಡೆಯಿತು.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಆಗಿರುವ ಪ್ರೊ ಆಶುತೋಷ್ ಶರ್ಮಾ ಅವರಿಗೆ ಗೌರವ ಪದವಿ “ಡಾಕ್ಟರ್ ಆಫ್ ಸೈನ್ಸ್” ನೀಡಿ ಗೌರವಿಸಲಾಯಿತು. ನಂತರ ವಿ ತಾ ವಿ ಪರಿಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸದ ಪದವಿಧರರಿಗೆ ಸ್ವರ್ಣ ಪದಕ ನೀಡಿ ಗೌರವಿಸಲಾಯಿತು.
ಈ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದ್ಮವಿಭೂಷಣ ಪುರಸ್ಕೃತರು ಹಾಗೂ ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಮಾಜಿ ಸಲಹೆಗಾರರು ಡಾ. ವಿ. ಕೆ. ಆತ್ರೆ ಅವರು ಘಟಿಕೊತ್ಸವದ ಭಾಷಣ ಮಾಡಿದರು.
ಡಾ ವಿ ಕೆ ಆತ್ರೆ ಅವರು ಮಾತನಾಡುತ್ತ ಜಗತ್ತಿನಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಇದರಿಂದ ಹೆಚ್ಚಾಗುತ್ತಿರುವ ಜಾಗತಿಕ ಬೇಡಿಕೆ ಹಾಗೂ ಸಮಸ್ಯೆಗಳು ಇವತ್ತಿನ ಇಂಜನಿಯರಿಂಗ್ ವಿದ್ಯಾರ್ಥಿಗಳ ಮುಂದೆ ಸಾಕಷ್ಟು ಸವಾಲಗಳನ್ನು ಹಾಗೂ ಅವಕಾಶಗಳನ್ನು ತೆರೆದಿಟ್ಟಿವೆ. ಈ ದಿಶೆಯಲ್ಲಿ ಇವತ್ತಿನ ಇಂಜನಿಯರಿಂಗ್ ವಿದ್ಯಾರ್ಥಿಗಳು ಕಾರ್ಯಗತವಾಗಬೇಕು. ಕಾರಣ ಇಂಜನಿಯರಿಂಗ್ ಶಿಕ್ಷಣವು ಸಾಮಾಜಿಕ ಬೇಡಿಕೆ ಹಾಗೂ ವೈಜ್ಞಾನಿಕ ಜ್ಞಾನದ ಕೊಂಡಿಯಾಗಿ ಕೆಲಸಮಾಡುತ್ತದೆ ಎಂದು ಡಾ ವಿ ಕೆ ಆತ್ರೆ ಹೇಳಿದರು.
ಇಂಜನಿಯರರ್ಸ ಗಳಿಗೆ ಕಲ್ಪನಾಶಕ್ತಿಯನ್ನು ನೈಜ ಪರಿಕರಗಳನ್ನು ಹಾಗೂ ಸೌಲಭ್ಯವನ್ನಾಗಿ ಮಾಡುವ ಒಂದು ದೊಡ್ಡ ಶಕ್ತಿ ಇರುತ್ತದೆ ಆದ್ದರಿಂದ ಸಾಮಾಜಿಕ ಬೇಡಿಕೆಗಳನ್ನು ಈಡೇರಿಸುವಲ್ಲಿ ಹಾಗೂ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಇವತ್ತಿನ ಇಂಜನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಜಾಗತಿಕವಾಗಿ ನಂಬಿಕೆ ಹಾಗೂ ಒತ್ತಡ ಹೆಚ್ಚುತ್ತಿದ್ದ ಇದರಿಂದ ಇಂಜನಿಯರಿಂಗ್ ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳನ್ನು ತೆರೆದುಕೊಂಡಿವೆ ಇದನ್ನು ಅವರು ಸದುಪಯೋಗ ಮಾಡಿಕೊಂಡು ಸಾಮಾಜಿಕವಾಗಿ ರಾಷ್ಟ್ರದ ಉನ್ನತಿಗಾಗಿ ಅವರು ಸೇವೆಮಾಡಬೇಕು ಎಂದು ಹೇಳಿದರು.
ಮುಂದಿನ ಮೂರು ದಶಕಗಳಲ್ಲಿ ಇಂಜನಿಯರಿಂಗ್ ವಿದ್ಯಾರ್ಥಿಗಳು ಅಥವಾ ಇಂಜನಿಯರ್ಸ್ ಯಾವ ಕ್ಷೇತ್ರದಲ್ಲಿ ಸವಾಲಗಳನ್ನು ಎದುರಿಸಬಹುದು ಎಂಬುದರ ಬಗ್ಗೆ ಮಾತನಾಡುತ್ತ ನವೀಕರಿಸಬಹುದಾದ ಶಕ್ತಿಯ ಆಕರಗಳು, ಹವಾಮಾನ ವೈಪರೀತ್ಯಗಳಿಂದ ಆಗುವ ಅನಾಹುತಗಳು ಹಾಗೂ ಅದನ್ನು ತಡೆಗಟ್ಟುವ ಕ್ರಮಗಳು, ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಪರಿಸರ ಸ್ನೇಹಿ ಶಕ್ತಿ ಆಕರಗಳ ಬಗ್ಗೆ ಸಂಶೋಧನೆ, ಜಾಗತಿಕವಾಗಿ ಹೆಚ್ಚುತ್ತಿರುವ ಆಹಾರ ಬೇಡಿಕೆಯನ್ನು ನೀಗಿಸಲು ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ, ಜಾಗತಿಕವಾಗಿ ಹರಡುತ್ತಿರುವ ಅನಾರೋಗ್ಯವನ್ನು ಹೋಗಲಾಡಿಸಲು ಜೀವವಿಜ್ಞಾನ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆ ಹೀಗೆ ಮೇಲೆ ತಿಳಿಸಿದ ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಸವಾಲುಗಳಿದ್ದು ಬಹಳಷ್ಟು ಅವಕಾಶಗಳನ್ನು ತೆರೆದಿಟ್ಟಿವೆ ಎಂದು ಹೇಳಿದರು.
ಸವಾಲುಗಳನ್ನು ಅವಕಾಶಗಳನ್ನಾಗಿ ಹಾಗೂ ಅವಕಾಶಗಳನ್ನ ಹೊಸ ಪರಿಹಾರ ಮತ್ತು ಪರಿಕರಗಳನ್ನಾಗಿ ಬದಲಾಯಿಸುವ ಶಕ್ತಿ ಇಂಜನಿಯರಿಂಗ್ ವಿದ್ಯಾರ್ಥಿಗಳಿಗೆ ಇದೆ ಎಂದು ಹೇಳಿದರು.
ಭೋಪಾಲ್ ಅನಿಲ ದುರಂತದಂತಹ ಘಟನೆಗಳು ನಡೆಯದಂತೆ ಇವತ್ತಿನ ಇಂಜನಿಯರಿಂಗ್ ವಿದ್ಯಾರ್ಥಿಗಳು ಮೂಲ ವಿಜ್ಞಾನದ ಕ್ಷೇತ್ರದಲ್ಲಿ ವಸ್ತುಗಳ ಗುಣಗಳ ಬಗ್ಗೆ ಆಗುತ್ತಿರುವ ಸಂಶೋಧನೆಗಳ ಜೊತೆಗೆ ತಂತ್ರಜ್ಞಾನವನ್ನು ಬೆರಸಿ ಹೊಸ ಪರಿಕರಗಳನ್ನು ಕಂಡುಹಿಡಿಯುತ್ತ ಗಮನ ಹರಿಸಿ ಮುಂದೆ ಇಂತಹ ದುರ್ಘಟನೆಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ನವೀಕರಿಸಬಹುದಾದ ಇಂಧನಗಳ ಬಗ್ಗೆ ಮಾತನಾಡುತ್ತ ಸೌರಶಕ್ತಿಯ ಈಗಿನ ಬೆಳವಣಿಗೆ ಸಾಕಾಗದು, ಈ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಸಂಶೋಧನೆ ನಡೆಯಬೇಕಿದೆ ಎಂದು ಹೇಳಿದರು.
ತಂತ್ರಜ್ಞಾನ ಬೆಳವಣಿಗೆ ಬಗ್ಗೆ ಮಾತನಾಡುತ್ತ ಇದು ಎರಡು ಬದಿಯ ಕರಗಸ ಇದ್ದ ಹಾಗೇ ಇದು ನಮ್ಮ ಬದುಕನ್ನ ಎಷ್ಟು ಸರಳ ಹಾಗೂ ಸಾಮಾನ್ಯಕರಿಸುತ್ತದೆಯೋ ಅಷ್ಟೇ ರೀತಿಯಲ್ಲಿ ಸಾಮಾಜಿಕವಾಗಿ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದರೆ ತಪ್ಪಾಗಲಾರದು ಎಂದು ಹೇಳಿ ನಾವು ಮಾನವೀಯ, ಸಾಂಸ್ಕೃತಿಕ ಹಾಗೂ ಭಾವನಾತ್ಮಕ ಮೌಲ್ಯಗಳನ್ನು ಮರೆಯದೆ ತಂತ್ರಜ್ಞಾನಕ್ಕೆ ನಾವು ಬಾಗದೆ ನಮ್ಮ ಬದುಕಿನ ಮೌಲ್ಯಗಳ ಹಾಗೂ ಸಮಸ್ಯೆಗಳ ಅವಶ್ಯಕತೆಗಳನುಸಾರ ಅದನ್ನು ಬಾಗಿಸಿ ಅನೂಕೂಲಕ್ಕೆ ತಕ್ಕಂತೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾಕ್ಟರ್ ಆಪ್ ಸೈನ್ಸ ಗೌರವ ಪದವಿಯನ್ನು ಸ್ವೀಕರಿಸಿ ಮಾತನಾಡಿದ ಪ್ರೋ ಆಶುತೋಷ್ ಶರ್ಮಾ ಅವರು ಇವತ್ತಿನ ವಿದ್ಯಾರ್ಥಿಗಳು ತಮ್ಮ ಪಠ್ಯದ ಜ್ಞಾನದ ಜೊತೆ ನಾವೀನ್ಯತೆ ಹಾಗೂ ಕಲ್ಪನಾ ಶಕ್ತಿಗೆ ಮಹತ್ವಕೊಡಬೇಕು ಎಂದು ಹೇಳಿದರು.
ವಿ ತಾ ವಿ ಕುಲಪತಿ ಪ್ರೋ ಕರಿಸಿದ್ದಪ್ಪ ಅತಿಥಿಗಳನ್ನು ಸ್ವಾಗತಸಿ ಪರಿಚಯಿಸಿದರು ಹಾಗೂ ವಿ ತಾ ವಿಯ ಸಾಧನೆ ಹಾಗೂ ಹೊಸ ಕಾರ್ಯಗಳ ಬಗ್ಗೆ ತಿಳಿಸಿದರು.
ವಿ ತಾ ವಿ ಡೀನ್ ಪ್ರೊ ಎನ. ವಿ. ಆರ್. ನಾಯ್ಡು ಪದವಿದರರನ್ನು ಪರಿಚಯಿಸಿದರು.
ಭೋಜನದ ನಂತರ ಜರುಗಿದ ಘಟಿಕೋತ್ಸವದ ಎರಡನೇ ಅವಧಿಯಲ್ಲಿ ವಿ ತಾ ವಿಯಿಂದ ಪಿಎಚ್.ಡಿ. ಪಡೆದ ೬೫೯ ಸಂಶೋಧನಾರ್ಥಿಗಳಿಗೆ ಪಿಎಚ್.ಡಿ. ಪದವಿ ನೀಡಲಾಯಿತು.
ಕುಲಸಚಿವರಾದ ಪ್ರೊ ಎ. ಎಸ್. ದೇಶಪಾಂಡೆ, ಮೌಲ್ಯಮಾಪನ ಕುಲಸಚಿವರಾದ ಪ್ರೋ. ಬಿ ಈ ರಂಗಸ್ವಾಮಿ ವಿ ತಾ ಬಿ ಕಾರ್ಯಕಾರಿ ಪರಿಷತ್ ಹಾಗೂ ವಿದ್ಯಾ ವಿಧಾನ ಮಂಡಳ ಸದಸ್ಯರು, ವಿವಿಧ ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರು ಪ್ರಾಚಾರ್ಯರರು ಹಾಗೂ ವಿ ತಾ ವಿ ಸಿಬ್ಬಂದಿ ಹಾಜರಿದ್ದರು.
ವಿಶ್ವವಿದ್ಯಾಲಯ ಈ ೨೦ ನೇ ಘಟಿಕೋತ್ಸವದಲ್ಲಿ ೬೩,೧೬೦ ಬಿ.ಇ., ೮೯೨ ಬಿ.ಆರ್ಕ್, ೪೮೧೭ ಎ೦ಬಿಎ, ೧೨೪೮ ಎ೦ಸಿಎ, ೧೭೦೪ ಎ೦.ಟೆಕ್., ೭೭ ಎ೦.ಆರ್ಕ್ ಮತ್ತು ೨೭೮ ಪಿಜಿ ಡಿಪ್ಲೋಮ ಪದವಿಗಳನ್ನು ಪ್ರದಾನ ಮಾಡಲಾಯಿತು ಹಾಗೂ ಯಶಸ್ವಿಯಾಗಿ ಸಂಶೋಧನಾ ಅಧ್ಯಯನ ಮುಗಿಸಿದ ಸಂಶೋಧನಾರ್ಥಿಗಳಿಗೆ ೬೫೯ ಪಿಎಚ್.ಡಿ., ೦೫ ಎ೦.ಎಸ್ಸಿ.(ಇಂಜಿನಿಯರಿಂಗ್)ಬೈ ರಿಸರ್ಚ್ ಮತ್ತು ೩ ಇಂಟಿಗ್ರೇಟೆಡ್ ಡುಯಲ್ ಡಿಗ್ರಿ ಪದವಿಗಳನ್ನು ಪ್ರದಾನ ಮಾಡಲಾಯಿತು.
ಅತಿ ಹೆಚ್ಚು ಗೋಲ್ಡ್ ಮೆಡಲ್ ಪಡೆದ ವಿದ್ಯಾರ್ಥಿಗಳ ವಿವರ
೧.೧೩ ಚಿನ್ನದ ಪದಕಗಳು – ಕುಮಾರಿ. ಅಸ್ಮತ್ ಶರ್ಮೀನ್ ಟಿ ಎಸ್, ಸಿವಿಲ್ ಎಂಜಿನಿಯರಿಂಗ್, ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಮಂಗಳೂರು
೨.೦೭ ಚಿನ್ನದ ಪದಕಗಳು – ಕುಮಾರ. ಅರುಣ್ ಡಿ, ಮೆಕ್ಯಾನಿಕಲ್ ಎಂಜಿನಿಯರಿಂಗ್, ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು.
೩.೦೭ ಚಿನ್ನದ ಪದಕಗಳು – ಕುಮಾರಿ. ಗಗಾನಾ ರೆಡ್ಡಿ, ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ ಎಂಜಿನಿಯರಿಂಗ್, ಸರ್ ಎಂ ವಿಶ್ವೇಶ್ವರಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು.
೪.೦೭ ಚಿನ್ನದ ಪದಕಗಳು – ಕುಮಾರಿ. ಅಪೂರ್ವಾ ಎಚ್ ಆರ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ವಿದ್ಯಾ ವರ್ದಕ ಕಾಲೇಜ್ ಆಫ್ ಎಂಜಿನಿಯರಿಂಗ್, ಮೈಸೂರು.
೫.೦೬ ಚಿನ್ನದ ಪದಕಗಳು – ಕುಮಾರಿ. ಸನ್ನಿಧಿ ಎ, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ವೇಮನಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರು.
೬.೦೪ ಚಿನ್ನದ ಪದಕಗಳು – ಕುಮಾರಿ. ಭೂಮಿಕಾ ಕೆ. ಎಂ, ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಎಂ ಬಿ ಎ), ಬಿ ಎನ್ ಎಂ ಐ ಟಿ, ಬೆಂಗಳೂರು
೭. ೦೪ ಚಿನ್ನದ ಪದಕಗಳು – ಕುಮಾರಿ. ಸೀಮಾ ಆರ್ ಹೆಗಡೆ, ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್, ಬಿಐಟಿ, ಬೆಂಗಳೂರು
೮. ೦೪ ಚಿನ್ನದ ಪದಕಗಳು – ಕುಮಾರಿ. ಪಿ. ಯುಕ್ತಾ, ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್, ಆರ್‌ಎನ್‌ಎಸ್‌ಐಟಿ, ಬೆಂಗಳೂರು.
೯. ೦೪ ಚಿನ್ನದ ಪದಕಗಳು – ಕುಮಾರ. ಜುನೆದ್ ಖಾನ್, ನ್ಯಾನೋ ಟೆಕ್ನಾಲಜಿ, ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್
ಟೆಕ್ನಾಲಜಿ, ಮಂಗಳೂರು.
೧೦. ೦೩ ಚಿನ್ನದ ಪದಕಗಳು – ಕುಮಾರ. ಡಿಸಿಲ್ವಾ ಡಿಯೋನಾ ಡೇನಿಯಲ್, ಎಂ ಸಿ ಎ, ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜು, ಮಂಗಳೂರು.
೧೧. ೦೩ ಚಿನ್ನದ ಪದಕಗಳು – ಕುಮಾರಿ. ಪ್ರಿಯಾ ಎಂ ಬಿ, ಎಂ.ಟೆಕ್. ಯುಬಿಡಿಟಿ ಕಾಲೇಜ್ ಆಫ್ ಎಂಜಿನಿಯರಿಂಗ್, ದಾವಣಗೆರೆ.
ಕೋವಿಡ -೧೯ ಕ್ಕೆ ಸಂಬಂಧಿಸಿದ ರಾಜ್ಯ ಸರ್ಕಾರ ಹೊರಡಿಸಿದ ಎಸ್ ಓ ಪಿ ಅನ್ವಯ ಈ ಘಟಿಕೋತ್ಸವವನ್ನು ನಡೆಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ