VTU 23ನೇ ವಾರ್ಷಿಕ ಘಟಿಕೋತ್ಸವ: ಮೂವರು ಮಹನಿಯರಿಗೆ “ಡಾಕ್ಟರ್ ಆಫ್ ಸೈನ್ಸ್” ಪ್ರಶಸ್ತಿ ಪ್ರದಾನ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಾರ್ಷಿಕ 23ನೇ ಘಟಿಕೋತ್ಸವ ವಿಶ್ವವಿದ್ಯಾಲಯದ “ಜ್ಞಾನ ಸಂಗಮ”ಆವರಣದ ಡಾ.ಎ ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ನಡೆಯಿತು.
ರಾಜ್ಯಪಾಲರು, ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆದ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಿದ್ದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಐಐಟಿಎಂ ಚೆನ್ನೈ ನಿರ್ದೇಶಕ ಪ್ರೋ.ವಿ.ಕಾಮಕೋಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೂವರು ಮಹನೀಯರಿಗೆ “ಡಾಕ್ಟರ್ ಆಫ್ ಸೈನ್ಸ್” ಗೌರವ ಪದವಿ ಪ್ರಧಾನ ಮಾಡಲಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳು ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ರಾಷ್ಟ್ರೀಯ ಶಿಕ್ಷಣ ಸಮೀತಿ ಟ್ರಸ್ಟ್ ಗೌರವಕಾರ್ಯದರ್ಶಿ ಡಾ.ಎ. ವಿ.ಎಸ್.ಮೂರ್ತಿ ಹಾಗೂ ಮೈಸೂರು ಮರ್ಚೆಂಟಿಲ್ ಕಂಪನಿ ವ್ಯವಸ್ಥಾಪಕ ನಿರ್ದೇಶ ಹಾಗೂ ಹೆಗ್ಗುಂಜೆ ರಾಜೀವ್ ಶೆಟ್ಟಿ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಡಾ.ಹೆಚ್.ಎಸ್.ಶೆಟ್ಟಿ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪ್ರಶಸ್ತಿ ನಿಡಿ ಗೌರವಿಸಲಾಯಿತು.
ವಿಶ್ವವಿದ್ಯಾಲಯದ ಈ 23ನೇ ವಾರ್ಷಿಕಘಟಿಕೋತ್ಸವದ ಸಮಯದಲ್ಲಿ, BE./B.Tech, B.Plan ಹಾಗೂ ಸಂಶೋಧನಾ ಪದವಿಗಳಾದ Ph.D ಸೇರಿದಂತೆ ಒಟ್ಟು 556 ಸಂಶೋಧನಾಪದವಿಗಳನ್ನು ನೀಡಲಾಯಿತು.
ಪದಕ ವಿಜೇತರು (ಮೊದಲ ಹತ್ತು ವಿಜೇತರ ಪಟ್ಟಿ)
- ಚಿನ್ನದ ಪದಕ– ಮದಕಶಿರಾ ಚಿನ್ಮಯವಿಕಾಸ್-ಸಿವಿಲ್ಎಂಜಿನಿಯರಿಂಗ್, ಸರ್ ಎಂ. ವಿಶ್ವೇಶ್ವರಯ್ಯಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಬೆಂಗಳೂರು
- ಚಿನ್ನದಪದಕ– ಅಭಿಷೇಕ್ ಮೆಕ್ಯಾನಿಕಲ್ಇಂಜಿನಿಯರಿಂಗ್, ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BIT), ಬೆಂಗಳೂರು
- ಚಿನ್ನದಪದಕ – ಗುಡಿಕಲ್ಸಾಯಿವಂಶಿ -ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್, ಸರ್ ಎಂ. ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬೆಂಗಳೂರು
- ಚಿನ್ನದಪದಕ– ಕೆ. ಆರ್.ಸಂಪತ್ಕುಮಾರ್-ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (BITM) ಬಳ್ಳಾರಿ
- ಚಿನ್ನದಪದಕ–ಕುಮಾರಿ ಪಾರ್ವತಿ ಸಲೇರಾಜೆ.-ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್, ಜವಾಹರಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ಇಂಜಿನಿಯರಿಂಗ್ (JNNCE) ಶಿವಮೊಗ್ಗ
- ಚಿನ್ನದಪದಕ – ಆವಂತಿಕಾ ಎ. ಸಾವಕಾರ್ – ಕೆಮಿಕಲ್ಇಂಜಿನಿಯರಿಂಗ್, ಕೆಎಲ್ಇ ಡಾ.ಎಂ.ಎಸ.ಶೇಷಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ (KLEMSSET) ಬೆಳಗಾವಿ.
- ಚಿನ್ನದಪದಕ – ಹರ್ಷಿತಾ ಆರ್. ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ಇಂಜಿನಿಯರಿಂಗ್, R.N.S ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿ (RNSIT), ಬೆಂಗಳೂರು
- ಚಿನ್ನದಪದಕ – ಇಶಿಕಾ ನವೀನ್ – ಇನ್ಫೋರ್ಮೇಷನ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಸಾಯಿವಿದ್ಯಾ ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿ, ಬೆಂಗಳೂರು
- ಚಿನ್ನದಪದಕ -ಸಾಹಸ್ ಎಸ್. ಏರೋನಾಟಿಕಲ್ ಇಂಜಿನಿಯರಿಂಗ್, ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿ, ಬೆಂಗಳೂರು
- ಚಿನ್ನದಪದಕ – ಕೆಂಚೋಗೈಲ್ತ್ಸೇನ(ಗೈಲ್ತ್ಸೇನ) – ಮೈನಿಂಗ್ ಇಂಜಿನಿಯರಿಂಗ್, ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ಟೆಕ್ನಾಲಜಿ, ಬೆಂಗಳೂರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ