
ಪ್ರಗತಿವಾಹಿನಿ ಸುದ್ದಿ: ವಕ್ಫ್ ಬೋರ್ಡ್ ಆಡಿಟರ್ ಹಾಗೂ ಆಡಿಟರ್ ಸಹೋದರ ಲಂಚ ಪಡೆಯುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದರುವ ಘಟನೆ ವಿಜಯಪುರ ನಗರದ ಐಬಿಯಲ್ಲಿ ನಡೆದಿದೆ.
ವಿಜಯಪುರ ವಕ್ಫ್ ಬೋರ್ಡ್ ಆಡಿಟರ್ ಮಹಮ್ಮದ್ ಹಾಗೂ ಆತನ ಸಹೋದರ ಮುಜಾಹಿದ್ದೀನ್ ವಕ್ಫ್ ಬೋರ್ಡ್ ಆಧೀನದಲ್ಲಿ ಬರುವ ಅಂಕಲಗಿ ಗ್ರಾಮದ ವಕ್ಫ್ ಕಮೀಟಿ ನವೀಕರಣ ಮಾಡಲು ಲಂಚದ ಬೇಡಿಕೆ ಇಟ್ಟಿದ್ದರು. ನಗರದ ಐಬಿಯಲ್ಲಿ ಒಂದುವರೆ ಲಕ್ಷ ಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಖಾಜಾಸಾಬ್ ನದಾಫ್ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ