*ರೌಡಿ ಪರೇಡ್ ನಲ್ಲಿ 200 ಕ್ಕೂ ಹೆಚ್ಚು ರೌಡಿಗಳಿಗೆ ಕಮಿಷನರ್ ಯಡಾ ಮಾರ್ಟಿನ್ ವಾರ್ನಿಂಗ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಂಜಾನ್ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ನೇತೃತ್ವದಲ್ಲಿ ರೌಡಿಶೀಟರಗಳ ಪರೇಡ್ ನಡೆಸಿ, ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇಂದು ನಗರದ ಪೊಲೀಸ್ ಮೈದಾನದಲ್ಲಿ ನಗರದ 11 ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಬಾರದು. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೋಮುಗಲಭೆ ಪ್ರಚೋದಿಸುವ ಪೋಸ್ಟ್ ಹಾಕಲಾಗುತ್ತಿದೆ. ಹಾಗಾಗಿ ರೌಡಿ ಪರೇಡನಲ್ಲಿ ಒಬೊಬ್ಬ ರೌಡಿಗಳಿಗೂ ವಾರ್ನಿಂಗ್ ಕೊಡಲಾಗಿದೆ.
200ಕ್ಕೂ ಅಧಿಕ ರೌಡಿಶೀಟರಗಳಿಗೆ ಬುದ್ಧಿವಾದ ಹೇಳಿದ್ದೇನೆ. ಹತ್ತು ವರ್ಷದಿಂದ ಯಾವುದೇ ಕ್ರಿಮಿನಲ್, ಗಲಭೆ ಮಾಡದೇ ಸುಧಾರಿಸಿದವರ ರೌಡಿಶೀಟರ್ ಕೇಸ್ ತೆಗೆದು ಹಾಕುತ್ತೇವೆ. ಕೆಲವರು ಕೆಲವೊಂದು ಸಲ ವೈಯಕ್ತಿಕ ಕಾರಣ, ಕೌಟುಂಬಿಕ ಕಾರಣದಿಂದ ಬಂದಿರೋದಿಲ್ಲ. ಯಾಕೇ ಬಂದಿಲ್ಲ ಅನ್ನೋದನ್ನ ಪರಿಶೀಲನೆ ಮಾಡ್ತಿವಿ. ರೌಡಿಶೀಟರ್ ಪರೇಡ್ ಗೆ ಬರದವರಿಗೆ ನಾವು ತಾಕೀತು ಮಾಡ್ತಿವಿ ಎಂದು ಯಡಾ ಮಾರ್ಟಿನ್ ಹೇಳಿದ್ದಾರೆ.