
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತ್ಯಾಜ್ಯ ವಿಲೇವಾರಿಯನ್ನು ಹೊನಗಾ ವ್ಯಾಪ್ತಿಯ ಹೊನ್ನಾಳಿಯಲ್ಲಿ ತಂದು ಸುಟ್ಟು ಹಾಕಲಾಗುತ್ತಿದೆ. ಇದರಿಂದ ಸ್ಥಳೀಯರಿಗೆ ದುರ್ನಾತ ಬೀರಿ ಸಮಸ್ಯೆಯಾಗುತ್ತಿದ್ದು, ಇದಕ್ಕೆ ಸೂಕ್ತ ಮಾರ್ಗದರ್ಶನ ನೀಡಿ ಎಂದು ಗ್ರಾಪಂ.ಅಧ್ಯಕ್ಷ ಆಗ್ರಹಿಸಿದರು. ಇದಕ್ಕೆ , ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ” ಶಾಸಕ ಸತೀಶ ಜಾರಕಿಹೊಳಿ” ಅವರು ಸಮಸ್ಯೆಯಾದರೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಎಂದು ಸಲಹೆ ನೀಡಿದರು.

ಪಿಡಿಓಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ:
ಗ್ರಾಮಗಳಲ್ಲಿ ಸಮಸ್ಯೆಗೆ ಆಸ್ಪದ ನೀಡದೇ ಪಿಡಿಓಗಳು ಎಚ್ಚರಿಕೆಯಿಂದ ಇರಿ, ಮಳೆ ಪ್ರಾರಂಭವಾಗಿದೆ. ಅಧಿಕಾರಿಗಳು ಯಾವುದಕ್ಕೂ ಸಮಸ್ಯೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಸತೀಶ ಜಾರಕಿಹೊಳಿ ಸೂಚನೆ ನೀಡಿದರು. ನೀರಿನ ಅಳವಡಿಕೆಗಾಗಿ ಅಗೆಯಲಾದ ಕಾಮಗಾರಿ ಶೀಘ್ರವೇ ಮುಗಿಸಿ, ಗ್ರಾಮಗಳಲ್ಲಿ ಯಾವುದೇ ತೊಂದರೆಯಾಗದಂತೆ ಪಿಡಿಓಗಳು ಜವಾಬ್ದಾರಿ ವಹಿಸಿ, ಕಾಮಗಾರಿಯನ್ನು ಚುರುಕುಗೊಳಿಸಿ ಎಂದು ಸೂಚನೆ ನೀಡಿದರು.
ಗ್ರಾಮಗಳ ನೀರಿನ ಪೈಪ್ ಲೈನ್ ಅಳವಡಿಸಿದ ಬಳಿಕ ರಸ್ತೆಗಳನ್ನು ಎರಡರಿಂದ ಮೂರು ಇಂಚು ಎತ್ತರ ಮಾಡಿಕೊಂಡು, ಗುಣಮಟ್ಟದ ರಸ್ತೆಗೆ ಆದ್ಯತೆಯ ನೀಡಬೇಕೆಂದು. ಅಧಿಕಾರಿಗಳು ಕುಂಟು ನೆಪ ಹೇಳಿಕೊಂಡರೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕ್ಷೇತ್ರದ ಶಿಕ್ಷಣಾಧಿಕಾರಿಗಳು ಮಾತನಾಡಿ, 2020 ರ ಕೊರೋನಾ ವೇಳೆ ಶಾಸಕ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಮಕ್ಕಳಿಗೆ ಲಕ್ಷಾಂತರ ಸ್ಯಾನಿಟೈಸರ್ ಹಾಗೂ ಮಾಸ್ಕ್ ನೀಡಿಲಾಗಿದೆ. 2021 ರ ಸಂದರ್ಭದಲ್ಲಿ ಮತ್ತೆ ಕೊರೋನಾ ಕಿಟ್ ನೀಡಬೇಕು. ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭಿಸಲು ಸರ್ಕಾರ ತೀರ್ಮಾನ ಮಾಡಿದೆ. ಮಕ್ಕಳ ಹಿತದೃಷ್ಟಿಯಿಂದ 20 ಪರೀಕ್ಷಾ ಕೇಂದ್ರಗಳನ್ನು ವಿಸ್ತರಿಸಿ 36 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. ಈ ಬಾರಿ ಕೊರೋನಾ ಕಿಟ್ ನೀಡಿ ಎಂದು ಮನವಿ ಮಾಡಿಕೊಂಡರು, ಇದಕ್ಕೆ ಸ್ಪಂಧಿಸಿದ ಜಾರಕಿಹೊಳಿ ಅವರು ವಿತರಿಸುವ ಕುರಿತು ತಿಳಿಸಲಾಗುವುದು ಎಂದರು.
ಗ್ರಾ ಪಂ ಅಧ್ಯಕ್ಷರು , ಪಿಡಿಓಗಳು ಸಭೆಗೆ ಗೈರು:- ಗ್ರಾ ಪಂ. ಅಭಿವೃದ್ಧಿ, ಕಾಮಗಾರಿಗಳ ವಿಳಂಬ, ವಿವಿಧ ಸಮಸ್ಯೆಗಳ ಬಗ್ಗೆ ಆಯೋಜಿಸಿದ ಶಾಸಕ ಸತೀಶ ಜಾರಕಿಹೊಳಿ ಅವರ ತಾ. ಪಂ ಸಭೆಗೆ ಗ್ರಾ ಪಂ ಅಧ್ಯಕ್ಷರು , ಪಿಡಿಓಗಳು ಸಭೆಗೆ ಗೈರಾಗಿದ್ದರು.
ವಸತಿ ಯೋಜನೆ ಅಡ್ಡಿಯಲ್ಲಿ ಮನೆಗಳ ನಿರ್ಮಾಣ ವಿಳಂಬ ಶಾಸಕರು ಅಸಮಾಧಾನ:- ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿ 8346 ಮನೆಗಳ ನಿರ್ಮಾಣಕ್ಕೆ ಒತ್ತು ಇದೆ. ಈ ಪೈಕಿ 6620 ಮನೆಗಳ ಕಾಮಗಾರಿ ಪ್ರಾರಂಭ ಹಂತದಲ್ಲೇ ಇವೆ. ಸೂಕ್ತ ದಾಖಲಾತಿ ಇಲ್ಲದರಿಂದ 1154 ಬಂದ್ ಆಗಿವೆ . 24 ಕೋಟಿ ರೂ. ಅನುದಾನದಲ್ಲಿ 74 ಲಕ್ಷ ರೂ. ಅನುದಾನ ಬಳಕೆಯಾಗಿದೆ ಎಂದು ವಸತಿ ಯೋಜನಾ ಅಧಿಕಾರಿಗಳ ಮಾಹಿತಿಗೆ ಪ್ರತಿಕ್ರಿಯಿಸಿದ ಶಾಸಕ ಸತೀಶ ಜಾರಕಿಹೊಳಿ ಅವರು, ಗ್ರಾಮದ ಜನತಾ ಮನೆಗಳ ನಿರ್ಮಾಣ ಕುರಿತು ಪಿಡಿಓ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ಮಳೆ ಸಂದರ್ಭದಲ್ಲಿ ಗ್ರಾಮೀಣ ಜನತೆಗೆ ಸಮಸ್ಯೆಯಾಗುತ್ತದೆ. ಮನೆಗಳ ನಿರ್ಮಾಣಕ್ಕೆ ಯಾವುದೇ ತೊಂದರೆ ಮಾಡಬೇಡಿ. ಕ್ಷೇತ್ರದ ಜನತೆಗೆ ಸೂರು ಮುಖ್ಯ ಎಂದರು.
ಸ್ವಚ್ಛ ಭಾರತ ಯೋಜನೆ ಅಡ್ಡಿ ಯಲ್ಲಿ ನಾಲ್ಕು ಗ್ರಾ ಪಂ ಜತೆ ಕೂಡಿ ಕಸ ವಿಲೇವಾರಿ ಜಾಗ ನಿಗದಿ ಮಾಡಲಾಗುವುದು ಶೀಘ್ರವೇ ಸರ್ವೆ ಮಾಡಿಕೊಂಡು ಮಂಜೂರು ಮಾಡುವ ಪ್ರಯತ್ನ ಮಾಡಲಾಗುವುದು ಎಂದು ಇಓ ರವಿ ಕರಲಿಂಗಣ್ಣವರ ತಿಳಿಸಿದರು.
ಶೇ 70. ರಷ್ಟು ತೆರಿಗೆ ವಸೂಲಿ : ಯಮಕನಮರಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 12 ಗ್ರಾ. ಪಂ ಗಳಲ್ಲಿನ 2020 ರ ವಿದ್ಯುತ್, ಮನೆಗಳ ತೆರಿಗೆ ಶೇ 70. ರಷ್ಟು ಪಾವತಿಸಿಕೊಳ್ಳಲಾಗಿದೆ ಎಂದು 12 ಪಿಡಿಓಗಳು ಶಾಸಕರಿಗೆ ತಿಳಿಸಿದರು.
ತಹಸೀಲ್ದಾರ್ ಆರ್.ಕೆ.ಕುಲಕರ್ಣಿ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಸನದಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಸಿದ್ದು ಸುಣಗಾರ ಮತ್ತಿತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ