Kannada NewsKarnataka News

ಗೋಕಾಕ್ ಇಲೆಕ್ಷನ್ ಹೇಗೆ ಮಾಡಬೇಕು ನಮಗೆ ಗೊತ್ತಿದೆ -ಲಖನ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ – ಗೋಕಾಕ ನಗರವನ್ನು ಭ್ರಷ್ಠಾಚಾರ ಮುಕ್ತ ಮಾಡಬೇಕಿದೆ. ನಗರವನ್ನು ಸ್ವಚ್ಛ ಮಾಡಬೇಕಿದೆ ಅದಕ್ಕಾಗಿ ನಾನು ಸ್ಪರ್ಧಿಸುತ್ತಿದ್ದೇನೆ. ಗೋಕಾಕ ಇಲೆಕ್ಷನ್ ಹೇಗೆ ಮಾಡಬೇಕು ನಮಗೆ ಗೊತ್ತಿದೆ  ಎಂದು ಲಖನ್ ಜಾರಕಿಹೊಳಿ ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಅಂಬಿರಾವ್ ಪಾಟೀಲ್ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ. ಅವರೇ ನನಗೆ ಪ್ರತಿಸ್ಫರ್ಧಿ. ಅವರು ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಅದು ಕ್ಷೇತ್ರದ 2 ಲಕ್ಷ ಮತದಾರರಿಗೆ ಗೊತ್ತಿದೆ. ನನಗೆ ಮತ ಕೊಟ್ಟರೆ ಕ್ಷೇತ್ರ ಭ್ರಷ್ಠಾಚಾರ ಮುಕ್ತವಾಗುತ್ತದೆ ಎಂದ ಅವರು, ಪಕ್ಷ ನನಗೆ ಟಿಕೆಟ್ ಘೋಷಣೆ ಮಾಡಿದೆ. ಈಗ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿಗೋಕಾಕ್ ದಲ್ಲಿ ಬೆಂಕಿಯಲ್ಲಿ ಚುನಾವಣೆ ನಡೆಸಿದಂತೆ -ಸತೀಶ್ ಜಾರಕಿಹೊಳಿ

ಅಲಿಬಾಬಾ ಮತ್ತು 40 ಕಳ್ಳರು

ರಮೇಶ್ ಜಾರಕಿಹೊಳಿ ಅವರ ಅಳಿಯಂದಿರು ಮತ್ತು ಕೆಲವು ನಗರಸಭೆ ಸದಸ್ಯರ ಭ್ರಷ್ಟಾಚಾರದಿಂದ ನಗರವನ್ನು ಮುಕ್ತ ಮಾಡಬೇಕಿದೆ. ಅವರು ಹಳ್ಳಿ ಹಳ್ಳಿಯಲ್ಲಿ 40 ಜನ ಕಳ್ಳರನ್ನು ಸಾಕಿದ್ದಾರೆ. ಅಲಿಬಾಬಾ ಮತ್ತು 40 ಕಳ್ಳರು ಎನ್ನುವಂತಾಗಿದೆ. ಅವರ  ಅಳಿಯಂದಿರ ತಪ್ಪಿನಿದ ಈ ಚುನಾವಣೆ ಬಂದಿದೆ ಎಂದು ಹರಿಹಾಯ್ದರು.

ರಮೇಶ್ ಮೇಲೆ ನನಗೆ ಪ್ರೀತಿ ಇದೆ. ಆದರೆ ಅವರ ಅಳಿಯಂದಿರಿಂದ ಗೋಕಾಕ ಕ್ಷೇತ್ರವನ್ನು ಮುಕ್ತ ಮಾಡಬೇಕಿದೆ. ಜನರನ್ನು ಭಯದ ವಾತಾವರಣದಲ್ಲಿಟ್ಟಿದ್ದಾರೆ. ರಮೇಶ್ ಅವರಿಗೆೆ ಗೊತ್ತಿದೆಯೋ ಇಲ್ವೊ, ಏಕೆಂದರೆ ಅವರು ಜಾಸ್ತಿ ಬೆಂಗಳೂರಲ್ಲೇ ಇರ್ತಾರೆ ಎಂದು ಲಖನ್ ಹೇಳಿದರು.

20 ವರ್ಷದಿಂದ ರೈಟ್ ಆ್ಯಂಡ್ ಲೆಫ್ಟ್ ಆಗಿದ್ವಿ

ನಾನು, ರಮೇಶ್ ಕಳೆದ 20 ವರ್ಷದಿಂದ ರೈಟ್ ಆ್ಯಂಡ್ ಲೆಫ್ಟ್ ಆಗಿದ್ವಿ. ಆದರೆ ಈಗ ಭ್ರಷ್ಟಾಚಾರ ಮಿತಿ ಮೀರಿದೆ. ಅದರಿಂದ ನಗರವನ್ನು ಮುಕ್ತ ಮಾಡಬೇಕಿದೆ. ಹಗರಣಗಳು ಬಹಳ ಇದೆ. ಹೇಳಿ ಮುಗಿಯುವುದಿಲ್ಲ. ಜನರ ಮುಂದೆ ಅದನ್ನೆಲ್ಲ ಹೇಳುತ್ತೇನೆ. ಇದರಲ್ಲಿ ಅವರ ಅಳಿಯಂದಿರು ಮತ್ತು ಕೆಲವು ನಗರಸಭೆ ಸದಸ್ಯರಿದ್ದಾರೆ. ಹಾಗಾಗಿ ಅಂಬಿರಾವ್ ಪಾಟೀಲ್ ಅವರೇ ನಮಗೆ ಪ್ರತಿಸ್ಫರ್ಧೆ ಎಂದು ಹೇಳಿದರು.

ನನಗೆ ಟಿಕೆಟ್ ಘೋಷಣೆಯಾಗಿದೆ. ಈಗ ರಮೇಶ್ ಜೊತೆ ಮಾತನಾಡುವುದೇನಿಲ್ಲ. ಜನರೇ ನನಗೆ ಶಕ್ತಿ ತುಂಬಿದ್ದಾರೆ. ಅವರಿಗಾಗಿ ನಿಂತಿದ್ದೇನೆ. 2 ಲಕ್ಷ ಮತದಾರರು ನನ್ನನ್ನು ರೆಡಿ ಮಾಡಿದ್ದಾರೆ ಎಂದೂ ಲಖನ್ ಜಾರಕಿಹೊಳಿ ಹೇಳಿದರು.

ಸೋಮವಾರ ನಾಮಪತ್ರ 

ಸತೀಶ್ ಜಾರಕಿಹೊಳಿ ಈಗಾಗಲೆ ಯಮಕನಮರಡಿ ಅಭಿವೃದ್ಧಿ ಮಾಡಿದ್ದಾರೆ.  ಹಾಗಾಗಿ ಅವರು ಇಲ್ಲಿಗೆ ವಾಪಸ್ ಬರುವ  ಪ್ರಶ್ನೆ ಇಲ್ಲ ಎಂದ ಲಖನ್, ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ. ಇಂದು ನನಗೆ ಟಿಕೆಟ್ ಘೋಷಣೆಯಾಗಿದೆ ಎಂದು ಅವರು ತಿಳಿಸಿದರು.

ನಾಮಪತ್ರ ಸಲ್ಲಿಸುವ ವೇಳೆ ರಾಜ್ಯ ನಾಯಕರ್ಯಾರೂ ಬರುವುದಿಲ್ಲ. ನಾವೇ ಸಲ್ಲಿಸುತ್ತೇವೆ. ಗೋಕಾಕ ಇಲೆಕ್ಷನ್ ಹೇಗೆ ಮಾಡಬೇಕೆಂದು ನಮಗೆ ಗೊತ್ತಿದೆ. ಪಕ್ಷದ ನಾಯಕರೆಲ್ಲ ನನಗೆ ಬಲ ತುಂಬಿದ್ದಾರೆ ಎಂದು ಹೇಳಿದರು.

ಗೋಕಾಕ ಕ್ಷೇತ್ರದಿಂದ ಕಾಂಗ್ರೆೆಸ್ ಅಭ್ಯರ್ಥಿಗಳಾಗಲು ಹಲವು ಆಕಾಕ್ಷಿಗಳಿದ್ದರು. ಆದರೆ ಲಖನ್ ಅವರನ್ನೇ ಅಭ್ಯರ್ಥಿ ಮಾಡಬೇಕೆಂದು ಸತೀಶ್ ಕಳೆದ ಹಲವು ದಿನಗಳಿಂದ ಪಟ್ಟು ಹಿಡಿದಿದ್ದರು. ರಮೇಶ್ ಜಾರಕಿಹೊಳಿ ಆತ್ಮೀಯರಾಗಿದ್ದ ಲಖನ್ ಕಳೆದ ವಿಧಾನಸಭೆ ಚುನಾವಣೆ ವೇಳಿ ಸತೀಶ್ ವಿರುದ್ಧ ಸಾಕಷ್ಟು ಗುಡುಗಿದ್ದರು. ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್ ಲೂಟಿ ಮಾಡಿದ್ದಾರೆ, ಏನೂ ಅಭಿವದ್ಧಿ ಮಾಡಿಲ್ಲ ಎಂದು ಆರೋಪಿಸಿದ್ದರು.

ಈಶ್ವರಪ್ಪ ಮಗಳ ಮೊಬೈಲ್ ಪತ್ತೆಯಾಗಿದ್ದು ಎಲ್ಲಿ? -ಶಾಕ್ ಆಗ್ತೀರಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button