Belagavi NewsBelgaum NewsKannada NewsKarnataka News

*ಬೀಡಿ, ಸಿಗರೇಟ್, ತಂಬಾಕು ನಮಗೂ ಬೇಕು: ಖೈದಿಗಳ ಪಟ್ಟು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರೇಣುಕಾಸ್ವಾಮಿ ಕೊಲೆ ಆರೋಪದಡಿ  ಜೈಲಿನಲ್ಲಿ ಇರುವ ನಟ ದರ್ಶನ ಸಿಗರೇಟ್ ಸೇದಿದ ಪರಿಣಾಮ ಹಿಂಡಲಗಾ ಕಾರಾಗೃಹದ ಕೈದಿಗಳಿಂದಲೂ ಸಿಗರೇಟ್ ನೀಡುವಂತೆ ಒತ್ತಾಯಿಸಿ ಭಾನುವಾರ ಕಾರಾಗೃಹದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹಿಂಡಲಗಾ ಕಾರಾಗೃಹದಲ್ಲಿ ಬೀಡಿ, ಸಿಗರೇಟ್ ತಂಬಾಕಿಗಾಗಿ ಖೈದಿಗಳು ಪ್ರತಿಭಟನೆ ನಡೆಸಿದ್ದಾರೆ‌‌ ಎನ್ನಲಾಗಿದೆ. ಬೀಡಿ ಸಿಗರೇಟ್ ತಂಬಾಕು ಕೊಡುವವರೆಗೆ ನಾವು ತಿಂಡಿ ತಿನ್ನಲ್ಲ ಎಂದು ಪಟ್ಟು ಹಿಡಿದಿದ್ದಾರೆ‌. ಬೆಳಗಿನ ಉಪಹಾರ ಮಾಡದ ಕೈದಿಗಳು ಬೀಡಿ ಸಿಗರೇಟ್ ಕೊಡುವವರೆಗೆ ನಾವು ಉಪಹಾರ ಮಾಡುವುದಿಲ್ಲ ಎಂದಿದ್ದಾರೆ.

ಜೈಲಧಿಕಾರಿಗಳಿಗೆ ತಲೆ ನೋವಾಗಿರುವ ಕೈದಿಗಳ ಬೇಡಿಕೆಗಳು ಸಧ್ಯ ಎನೂ ಮಾಡಲಾಗದ ಪರಿಸ್ಥಿತಿಯಲ್ಲಿರುವ ಕಾರಾಗೃಹದ ಸಿಬ್ಬಂದಿ ಕಂಗಾಲಾಗಿದ್ದಾರೆ. ಬೀಡಿ ಸಿಗರೇಟ್ ನೀಡದಿದ್ದರೆ ಮಧ್ಯಾಹ್ನ ಊಟವನ್ನೂ ಮಾಡದ ಬೆದರಿಕೆ ಹಾಕಿರುವ ಕೈದಿಗಳು ಮಧ್ಯಾಹ್ನ ಊಟವನ್ನೂ ಮಾಡಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button