EducationKannada NewsKarnataka NewsNationalPolitics

*SSLC ಪರೀಕ್ಷೆಯಲ್ಲಿ ಹಿಜಾಬ್ ಗೆ ಅವಕಾಶ ನೀಡುವ ಕುರಿತು ಚರ್ಚೆ ಮಾಡ್ತೇವೆ: ಗೃಹ ಸಚಿವ ಪರಂ*

ಪ್ರಗತಿವಾಹಿನಿ ಸುದ್ದಿ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಜಾಬ್ ಗೆ ಅವಕಾಶ ನೀಡುವ ವಿಚಾರವಾಗಿ ಸುಧೀರ್ಘವಾಗಿ ಚರ್ಚೆ ಮಾಡುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿಕೆ ನೀಡಿದ್ದು, ಹಿಜಾಬ್ ನಿಷೇಧ ಪ್ರಕರಣ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. 

ರಾಜ್ಯದಲ್ಲಿ SSLC ಪರೀಕ್ಷೆಯಲ್ಲಿ ಹಿಜಾಬ್ ಬಳಕೆಗೆ ಅವಕಾಶದ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿದ್ದು,‌ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಜಾಬ್ ಗೆ ಅವಕಾಶ ನೀಡುವ ವಿಚಾರವಾಗಿ ಸುಧೀರ್ಘವಾಗಿ ಚರ್ಚೆ ಮಾಡುತ್ತೇವೆ. ಇನ್ನು ಒಂದು ತಿಂಗಳು ಸಮಯವಿದೆ ನೋಡೋಣ ಚರ್ಚೆ ಮಾಡುತ್ತೇವೆ ಎಂದರು.

ಕರ್ನಾಟಕ ಭವನ ಉದ್ಘಾಟನೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮನ್ನ ಕರೆದರೆ ಹೋಗುತ್ತೇವೆ.  ಈ ಹಿಂದೆ ಉಪಮುಖ್ಯಮಂತ್ರಿ ಇದ್ದಾಗ ನಾನೇ ಅಡಿಗಲ್ಲು ಹಾಕಿದ್ದೆ. ಅವರು ಕರೆದರೆ ಹೋಗೋಣ, ಕರಿಯದೇ ಇದ್ರೆ ಹೇಗೆ ಹೋಗೋದು? ನನ್ನ ಲೀಡರ್ ಶಿಪ್ ನಲ್ಲಿ ದೆಹಲಿಗೆ ಹೋಗ್ತಾರೆ ಎನ್ನುತ್ತಿದ್ದಾರೆ. ಹೈಕಮಾಂಡ್ ಮೀಟ್ ಅಂತ ನೀವು ಹಾಕುತ್ತಿರಾ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button