Kannada NewsKarnataka News

ದುರ್ಬಲ ಅಡಿಪಾಯ -ನೆಲಕ್ಕುರುಳಿದ ನಾಮಫಲಕ

ದುರ್ಬಲ ಅಡಿಪಾಯ -ನೆಲಕ್ಕುರುಳಿದ ಮಾರ್ಗಸೂಚಕ ಫಲಕ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ದುರ್ಬಲ ಅಡಿಪಾಯದಿಂದಾಗಿ ಇಲ್ಲಿಯ ಬಿಗ್ ಬಜಾರ್ ಸಮೀಪ ಅಳವಡಿಸಲಾಗಿದ್ದ ರಸ್ತೆ ನಾಮ ಫಲಕ ನೆಲಕ್ಕುರುಳಿದೆ. 2 ದಿನಗಳ ಹಿಂದೆಯೇ ಬೋರ್ಡ್ ಬಿದ್ದಿದ್ದು, ಫುಟ್ ಪಾತ್ ಗೆ ಅಳವಡಿಸಿದ್ದ ಟೈಲ್ಸ್ ಸಹಿತ ಕಿತ್ತು ಬಂದಿದೆ.

ಅಟಲ್ ಬಿಹಾರಿ ವಾಜಪೇಯಿ ಮಾರ್ಗ ಎಂದು ನಾಮಫಲಕವನ್ನು ಮಹಾನಗರ ಪಾಲಿಕೆಯಿಂದ ಹಾಕಲಾಗಿತ್ತು. ಕೆಲವರು ಅದರ ಸಪೋರ್ಟ್ ಪಡೆದು ಬೇರೆ ಫಲಕ ಅಳವಡಿಸಲು ಯತ್ನಿಸಿದಾಗ ಬೋರ್ಡ್ ಕಿತ್ತು ಬಿದ್ದಿದೆ ಎನ್ನಲಾಗುತ್ತಿದ್ದರೂ ಬೋರ್ಡ್ ಗೆ ಹಾಕಿದ್ದ ಅಡಿಪಾಯ ಎಷ್ಟು ದುರ್ಬಲವಾಗಿದೆ ಎನ್ನುವುದು ಸ್ಪಷ್ಟವಾಗಿ ಕಾಣುವಂತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬಿದ್ದಿರುವ ಬೋರ್ಡ್ ಚಿತ್ರ ಪ್ರಕಟವಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಮಹಾನಗರ ಪಾಲಿಕೆ ಅಧಿಕಾರಿಗಳು, ಒಂದೆರಡು ದಿನದಲ್ಲಿ ಫಲಕ ಪುನರ್ ಸ್ಥಾಪಿಸುವುದಾಗಿ ತಿಳಿಸಿದ್ದಾರೆ.

ಕಳೆದ ವರ್ಷ ಬೆಳಗಾವಿಗೆ ಪ್ರಧಾನಿ -ರಾಷ್ಟ್ರಪತಿ ಆಗಮಿಸುವ ಸಂದರ್ಭದಲ್ಲಿ ನಗರದ ವಿವಿಧ ರಸ್ತೆಗಳಿಗೆ ಇಂತಹ ನಾಮಫಲಕವನ್ನು ಅಳವಡಿಸಲಾಗಿತ್ತು. ಆದರೆ ಅವುಗಳಿಗೆ ಸೂಕ್ತ ರೀತಿಯಲ್ಲಿ ಅಡಿಪಾಯ ಹಾಕಲಾಗಿಲ್ಲ ಎನ್ನುವುದು ಈಗ ಬಹಿರಂಗವಾಗಿದೆ.

 

ಫಲಕದ ಅಡಿಪಾಯ ದುರ್ಬಲವಾಗಿದ್ದರಿಂದ ಅದು ಕಿತ್ತು ಬಿದ್ದಿದೆ. ಪುನರ್ ಅಳವಡಿಸುವಾಗ ಇನ್ನಷ್ಟು ಆಳವಾದ ಮತ್ತು ಭದ್ರವಾದ ಅಡಿಪಾಯ ಅಗತ್ಯ

-ಮಲ್ಲಿಕಾರ್ಜುನ ಮದ್ನೂರ್, ಎಂಜಿನಿಯರ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button