ನೇಕಾರರು ಕಾಯಿಪಲ್ಲೆ ಮಾರುತ್ತಿದ್ದಾರೆ, ನೆರವಿಗೆ ಬನ್ನಿ – ವಿಧಾನಸಭೆಯಲ್ಲಿ ಅಭಯ ಪಾಟೀಲ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾದಿಂದ ತತ್ತರಿಸಿರುವ ನೇಕಾರರು ಕಾಯಿಪಲ್ಲೆ ಮಾರುತ್ತಿದ್ದಾರೆ. ಕೆಲವರು ಗುಳೆ ಹೋಗಿದ್ದರೆ ಇನ್ನು ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರಕಾರ ತಕ್ಷಣ ಅವರ ನೆರವಿಗೆ ಬರಬೇಕು ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಆಗ್ರಹಿಸಿದ್ದಾರೆ.
ವಿಧಾನಸಭೆಯಲ್ಲಿ ಬುಧವಾರ ಮಾತನಾಡಿದ ಅವರು ನೇಕಾರ ಸಮ್ಮಾನ್ ನಿಧಿಯನ್ನು 2 ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ವಿದ್ಯುತ್ ಮಗ್ಗ ನೆಕಾರರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಜವಳಿ ಸಚಿವರು ನಮ್ಮ ಜಿಲ್ಲೆಯವರೇ ಇದ್ದಾರೆ. ಅವರಿಗೆ ಪರಿಸ್ಥಿತಿಯ ಅರಿವಿದೆ. ಕೊರೋನಾ ವಾರಿಯರ್ಸ್ ಸನ್ಮಾನಕ್ಕೆ ಸರಕಾರ ನೇಕಾರರಿಂದ ಸೀರಿ ಖರೀದಿಸಲಿದೆ ಎಂದು ಹೇಳಲಾಗಿತ್ತು. ಆದರೆ ಅದು ಆಗಿಲ್ಲ. ಎಲ್ಲ ಶಾಸಕರಿಗೂ ನಾನು ಪತ್ರ ಬರೆದಿದ್ದೆ. ಆದರೆ ಸಚಿವ ಶಿವರಾಮ ಹೆಬ್ಬಾರ ಮಾತ್ರ 7 ಲಕ್ಷ ರೂ. ಸೀರೆ ಖರೀದಿಸಿದ್ದಾರೆ. ಹಾಗಾಗಿ ತಕ್ಷಣ ಸಂಕಷ್ಟದಲ್ಲಿರುವ ನೇಕಾರರ ನೆರವಿಗೆ ಸರಕಾರ ಬರಬೇಕು ಎಂದು ಅವರು ಒತ್ತಾಯಿಸಿದರು.
ಮತ್ತೆ ಶಾಸಕ ಅಭಯ ಪಾಟೀಲ್ ಮಧ್ಯರಾತ್ರಿ ಕಾರ್ಯಾಚರಣೆ
ನೇಕಾರರ ಸಭೆ ನಡೆಸಿದ ಶಾಸಕ ಅಭಯ ಪಾಟೀಲ
ಬೆಳಗಾವಿಗೆ ಆಗಿರುವ ಅನ್ಯಾಯ ಸರಿಪಡಿಸಿ; ಶಾಸಕ ಅಭಯ ಪಾಟೀಲ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ