
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಾಜ್ಯಾದ್ಯಂತ ಕಠಿಣ ನಿಯಮಗಳು ಜಾರಿಯಾಗಿದ್ದು, ಎರಡು ದಿನಗಳ ಕಾಲ ಕರ್ನಾಟಕ ಸಂಪೂರ್ಣ ಬಂದ್ ಆಗಲಿದೆ.
ಇಂದು ರಾತ್ರಿ 9ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಾಗಿದ್ದು, ಏನೆಲ್ಲ ಇರುತ್ತೆ, ಯಾರಿಗೆಲ್ಲ ನಿರ್ಬಂಧ ವಿಧಿಸಲಾಗಿದೆ ಎಂಬುದನ್ನು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಎರಡು ದಿನಗಳ ಕಾಲ ರಾಜ್ಯದಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದು, ಸಂಪೂರ್ಣ ಬಂದ್ ವಾತಾವರಣವಿರಲಿದೆ. ಮೆಡಿಕಲ್ ಸೇವೆ ಹೊರತುಪಡಿಸಿ ಉಳಿದ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಹೆಳಿದ್ದಾರೆ.
* ಅಂತರ್ ಜಿಲ್ಲಾ, ಅಂತರ್ ರಾಜ್ಯ ಒಡಾಟಕ್ಕೆ ಖಾಸಗಿ ವಾಹನಗಳಿಗೆ ನಿಷೇಧ
* ತುರ್ತು ಸೇವೆಯ ವಾಹನಕ್ಕೆ-ವೈದ್ಯರು, ನರ್ಸ್, ಆಂಬುಲೆನ್ಸ್ ಗಳಿಗೆ ಮಾತ್ರ ಅವಕಾಶ
* ಟೆಲಿಕಾಂ ಕಂಪನಿ ಸಿಬ್ಬಂದಿಗಳು ಐಡಿ ಕಾರ್ಡ್ ತೋರಿಸಿ ಸಂಚರಿಸಬಹುದು
* ರೋಗಿಗಳು, ಅವರ ಸಾಹಯಕರು, ವ್ಯಾಕ್ಸಿನೇಷನ್ ತೆಗೆದುಕೊಂಡು ಹೋಗುವವರು ಐಡಿಕಾರ್ಡ್ ತೋರಿಸಿ ಓಡಾಡಲು ಅವಕಾಶ
* ಬಸ್, ರೈಲು, ವಿಮಾನ ನಿಲ್ದಾಣಗಳಿಗೆ ತೆರಳುವವರು ಟಿಕೆಟ್ ತೋರಿಸಬೇಕು
* ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯವಸ್ತುಗಳ ಖರೀದಿಗೆ ಅವಕಾಶ
* ಸಿನಿಮಾ, ಬಾರ್, ಪಬ್, ಜಿಮ್ ಗಳು ಬಂದ್
* ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗೆ ಅವಕಾಶ
* ಹೋಂ ಡಿಲೆವರಿಗೆ ಅವಕಾಶ
* ಬಸ್ ರೈಲು, ವಿಮಾನ ಪ್ರಯಾಣಕ್ಕೆ ಅವಕಾಶ
* ಧಾರ್ಮಿಕ ಕೇಂದ್ರಗಳಿಗೆ ಭಕ್ತರಿಗೆ ನಿಷೇಧ
* ರಾಜಕೀಯ ಕಾರ್ಯಕ್ರಮಕ್ಕೆ ನಿರ್ಬಂಧ
* ಮದುವೆ ಕಾರ್ಯಕ್ರಮಕ್ಕೆ 50 ಜನರಿಗೆ ಅವಕಾಶ.
* 2 ದಿನ ಮಾತ್ರ ಕಟ್ಟಡ ಕೆಲಸ, ಸಿವಿಲ್ ಕೆಲಸಕ್ಕೆ ನಿರ್ಬಂಧ
ಗೋಕಾಕ್, ಅರಬಾವಿಯಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ವ್ಯಾಪಾರ -ಶಾಸಕ ಬಾಲಚಂದ್ರ ಜಾರಕಿಹೊಳಿ