ನಾಳೆಯಿಂದ ರಾಜ್ಯಾದ್ಯಂತ ಹೊಸ ರೂಲ್ಸ್; ನೈಟ್, ವೀಕೆಂಡ್ ಕರ್ಫ್ಯೂ ; ಶಾಲೆ, ಕಾಲೇಜು ಬಂದ್; ಇಲ್ಲಿದೆ ಗೈಡ್ ಲೈನ್ಸ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿದ್ದು, ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಈ ಕುರಿತು ಮಾತನಾಡಿದ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್, ಕೋವಿಡ್ ನಿಯಂತ್ರಣಕ್ಕೆ ನಾಳೆಯಿಂದ ಮುಂದಿನ 14ದಿನಗಳಿಗೆ ಅನ್ವಯವಾಗುವಂತೆ ಕಠಿನ ಮಾರ್ಗಸೂಚಿ ಜಾರಿಮಾಡಲಾಗಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6ಗಂಟೆಯವರೆಗೆ ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಮುಂಜಾನೆ 6ರಿಂದ 10 ಗಂಟೆಯವರೆಗೆ ಮಾತ್ರ ಖರೀದಿ ಮಾಡಬಹುದು. ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲೇ ಮಾತ್ರ ಅವಕಾಶ.
ನಾಳೆಯಿಂದ ಮೇ 4ರ ವರೆಗೆ ಹೊಸ ರೂಲ್ಸ್ ಅನ್ವಯ. ಮಾಲ್, ಸಿನೇಮಾ ಥಿಯೇಟರ್, ಜಿಮ್ ಬಂದ್ ಆಗಲಿವೆ.
ಶಾಲೆ ಕಾಲೇಜುಗಳು ಸಂಪೂರ್ಣ ಬಂದ್ ಆಗಲಿವೆ. ರಾತ್ರಿ ಕರ್ಫ್ಯೂ ಜಾರಿಯಾಗಲಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವೆರಗೆ ಸಂಪೂರ್ಣ ಬಂದ್. ಹೊಟೆಲ್ ಗಳಲ್ಲಿ ಶೇ.50ರಷ್ಟು ಸೀಟ್. 9 ಗಂಟೆ ಮೇಲೆ ಅಗತ್ಯ ವಸ್ತು ಬಿಟ್ಟು ಎಲ್ಲ ಬಂದ್.
ಇಲ್ಲಿದೆ ಸಮಗ್ರ ವಿವರ –
Guidelines to Contain Covid 19 -Ktaka 20.04.2021
ದೇಶವನ್ನು ಲಾಕ್ ಡೌನ್ ನಿಂದ ರಕ್ಷಿಸಿ