ಜಿಐಟಿ ಯಲ್ಲಿ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮಕ್ಕೆ ಬೇರೆ ಯಾವುದೇ ಪರ್ಯಾಯವಿಲ್ಲಾ ಮತ್ತು ಇದು ಯಶಸ್ಸಿನ ಏಕೈಕ ಮಂತ್ರವಾಗಿದೆ ಎಂದು ಜಿ ಐ ಟಿ ಆಡಳಿತ ಮಂಡಳಿಯ ಅಧ್ಯಕ್ಷರಾದ ಯು. ಏನ್. ಕಾಲಕುಂದ್ರಿಕರ್ ಹೇಳಿದರು.
ಇವರು ಜಿ ಐ ಟಿ ಯಲ್ಲಿ ಶುಕ್ರವಾರ ಹಮ್ಮಿಕೊಂಡ 2019 -20 ರಲ್ಲಿ ಇಂಜಿನಿಯರಿಂಗ್ ಪದವಿಯ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಇವತ್ತಿನ ವೇಗಕ್ಕೆ ಪರಿಶ್ರಮದ ಜೊತೆ ” ಸ್ಮಾರ್ಟ್ ವರ್ಕ್ ” ಸಹ ಅವಶ್ಯಕೆತೆ ಇದೆ ಮತ್ತು ಕ್ಷಿಪ್ರ ಫಲಿತಾಂಶದಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು.
ಜಿ ಐ ಟಿ ಯ ಪ್ಲೇಸೆಮೆಂಟ್ಸ್ ಬಗ್ಗೆ ಮಾತನಾಡುತ್ತ, ಇವತ್ತಿನ ಔದ್ಯೋಗಿಕ ವಲಯದ ಬೇಡಿಕೆಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತಿದ್ದು”ಇಂಡಸ್ಟ್ರಿ ರೆಡಿ ಎಂಜಿನೀರ್ಸ್” ಕಲ್ಪನೆಯನ್ನು ಇಟ್ಟುಕೊಂಡು ನಮ್ಮ ಮಹಾವಿದ್ಯಾಲಯ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿಗಳ ಹೊಸ ಹೊಸ ಐಡಿಯಾ ಗಳಿಗೆ ರೆಕ್ಕೆ ಕೊಟ್ಟು ಸ್ವಾವಲಂಬಿಯಾಗಿ ಸ್ಟಾರ್ಟ್ ಅಪ್ ಗಳನ್ನೂ ತೆರೆಯಲು ಸಂಸ್ಥೆ ಕೆಲಸ ಮಾಡುತಿದ್ದೆ ಎಂದು ಹೇಳಿದರು.
ಜಿಐಟಿ ಮುಖ್ಯವಾಗಿ ವಿದ್ಯಾರ್ಥಿಗಳನ್ನು ಪ್ರಜ್ಞಾವಂತ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಜೊತೆಗೆ ಶಿಕ್ಷಣದ ಅವಧಿಯಲ್ಲಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳನ್ನು ಕಾರ್ಯತಂತ್ರದ ಬೋಧನೆಯ ಮೂಲಕ ಯಶಸ್ವಿ ವೃತ್ತಿಪರರನ್ನಾಗಿ ಮಾಡುವುದರ ಮೇಲೆ ತನ್ನ ಶಿಕ್ಷಣದ ಉದ್ದೇಶವನ್ನು ಕೇಂದ್ರೀಕರಿಸಿದೆ ಎಂದು ಅವರು ಹೇಳಿದರು.
ಹಳೆಯ ವಿದ್ಯಾರ್ಥಿಗಳ ಬಗ್ಗೆ ಮಾತನಾಡುತ್ತ ನಮ್ಮ ಕಾಲೇಜಿನಿಂದ ಶಿಕ್ಷಣ ಪಡೆದು ಹೊರಹೊಮ್ಮಿದ ನಮ್ಮ ಅನೇಕ ವಿದ್ಯಾರ್ಥಿಗಳು ಭಾರತ ಮತ್ತು ವಿದೇಶಗಳಲ್ಲಿ ಹಲವಾರು ಪ್ರಸಿದ್ಧ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ತಿಳಿಸಿದರು.
ಪಠ್ಯಕ್ರಮದ ಜೊತೆಗೆ ವಿದ್ಯಾರ್ಥಿಗಳ ಸೃಜನಶೀಲ ಮನಸ್ಸನ್ನು ಪ್ರೇರೇಪಿಸುವುದು ಹಾಗೂ ಅವರ ಬೌದ್ಧಿಕ ಸಾಮರ್ಥ್ಯವನ್ನು ಸುಧಾರಿಸಲು ಅವರಿಗೆ ಹಲವಾರು ವೇದಿಕೆಗಳನ್ನು ಜಿ ಐ ಟಿ ನೀಡುತ್ತಿದೆ ಇದರಿಂದ ನಮ್ಮ ವಿದ್ಯಾರ್ಥಿಗಳು ತಮ್ಮ ಜೀವಿತಾವಧಿಯಲ್ಲಿ ಒಬ್ಬ ತಂತ್ರಜ್ಞ ಪರಿಣಿತರಾಗಿ ಸಾಮಾಜಿಕವಾಗಿ ಅಮೂಲ್ಯವಾದ ಕೊಡುಗೆಗಳನ್ನ ಕೊಡುತ್ತಾರೆ ಎಂದು ನಾವು ನಂಬುತ್ತೇವೆ ಎಂದು ಹೇಳಿದರು.
ಈ ಮುಂದಿನ ನಾಲ್ಕು ವರ್ಷಗಳು ನಿಮ್ಮ ಬದುಕಿನ ಅತ್ಯಂತ ಮೌಲ್ಯಯುತ ಸಮಯವಾಗಿದ್ದು ನಿಮ್ಮ ಕಿರಿಯರಿಗೆ ಸ್ಫೂರ್ತಿಯಾಗುವಂತಹ ಸಾಧನೆಗಳನ್ನ ಈ ಜಿ ಐ ಟಿ ಯಲ್ಲಿ ನಿಮ್ಮಿಂದ ಬರಲಿ ಎಂದು ಹೊಸ ವಿದ್ಯಾರ್ಥಿಗಳಿಗೆ ತಿಳಿಸಿದರು.
ನಂತರ ಕಾಲೇಜಿನ ಪ್ರಾಚಾರ್ಯ ಪ್ರೋ. ಡಿ. ಎ. ಕುಲಕರ್ಣಿ ಅವರು ಒಟ್ಟು ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ಇರುವ ಎಲ್ಲ ರೀತಿಯ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಶೈಕ್ಶಣಿಕ ವಿಭಾಗದ ಡೀನ್ ಡಾ. ಎಂ ಎಸ ಪಾಟೀಲ ಜಿ ಐ ಟಿ ಯ ಸ್ವಾಯತ್ತತೇ ಬಗ್ಗೆ ಹೇಳುತ್ತಾ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಇದು ಹೇಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಈ ಸಮಾರಂಭದಲ್ಲಿ ಎಲ್ಲ ವಿಭಾಗದ ಮುಖ್ಯಸ್ಥರು, ಅನ್ವಯಿಕ ವಿಜ್ಞಾನ ವಿಭಾಗಗಳ ಸಿಬ್ಬಂದಿ ವರ್ಗ ಹಾಗೂ ಜಿ ಐ ಟಿ ಗೆ ಪ್ರವೇಶ ಪಡೆದ 800 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮತ್ತು ಪಾಲಕರು ಹಾಜರಿದ್ದರು. ಈ ಕಾರ್ಯಕ್ರಮವನ್ನು ಆನ್ವಯಿಕ ವಿಜ್ಞಾನ ವಿಭಾಗಗಳು ಜಂಟಿಯಾಗಿ ಸಂಯೋಜಿಸಿದ್ದವು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ