Latest

ಸಿಎಂ ಬೊಮ್ಮಾಯಿ ಹೇಳಿಕೆಗೆ ಮಹಾರಾಷ್ಟ್ರ ಡಿಸಿಎಂ, ಅಜಿತ್ ಪವಾರ್ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ, ಮುಂಬೈ:  ಸಾಂಗ್ಲಿ ಜಿಲ್ಲೆ ಮತ್ತು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಜತ್ತ ಗ್ರಾಮಗಳು ಕರ್ನಾಟಕಕ್ಕೆ ಸೇರ್ಪಡೆಯಾಗಬೇಕೆಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯನ್ನು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇೆಂದ್ರ ಪಡ್ನವೀಸ್ ಮತ್ತು ವಿರೋಧ ಪಕ್ಷದ ನಾಯಕ ಅಜಿತ್ ಪವಾರ್  ಖಂಡಿಸಿದ್ದಾರೆ.

ಜತ್ತ ಮತ್ತು ಅಕ್ಕಲಕೋಟ್ ಮೇಲೆ ಹಕ್ಕು ಸಾಧಿಸುವುದನ್ನು ಕರ್ನಾಟಕದ ಮುಖ್ಯಮಂತ್ರಿ ನಿಲ್ಲಿಸಬೇಕು. ಮಹಾರಾಷ್ಟ್ರದ ಒಂದಿಂಚು ನೆಲವನ್ನೂ ಕರ್ನಾಟಕಕ್ಕೆ ಕೊಡುವುದಿಲ್ಲ ಎಂದು ಅವರು ಹೇಳಿದ್ದಾರೆ.

 

ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಿ ಕರ್ನಾಟಕದ ಮುಖ್ಯಮಂತ್ರಿಗೆ ಕಡಿವಾಣ ಹಾಕಬೇಕು ಗಡಿ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿರುವಾಗ ಕರ್ನಾಟಕದ ಮುಖ್ಯಮಂತ್ರಿಗಳ ಇಂತಹ ಬೇಜವಾಬ್ದಾರಿ, ಪ್ರಚೋದನಕಾರಿ ಹೇಳಿಕೆಗಳನ್ನು ಮಹಾರಾಷ್ಟ್ರ ಸಹಿಸುವುದಿಲ್ಲ ಎಂದಿದ್ದಾರೆ ಅಜಿತ ಪವಾರ.

ಜತ್ತ ಮತ್ತು ಅಕ್ಕಲಕೋಟ ತಾಲೂಕಿನ ಗ್ರಾಮಗಳ ಹಕ್ಕು ಇವರಿಗೆ ಕನ್ನಡಿಯೊಳಗಿನ ಗಂಟಿನಂತೆ ಆಗಲಿದೆ. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸೇರಿದಂತೆ ಗಡಿ ಭಾಗದ 814 ಮರಾಠಿ ಭಾಷಿಕ ಗ್ರಾಮಗಳು ಮಹಾರಾಷ್ಟ್ರಕ್ಕೆ ಬರುತ್ತಿರುವುದು ಅಸಲಿ ಸಮಸ್ಯೆಯಾಗಿದೆ. ಈ ಗ್ರಾಮಗಳು ಬಂದ ನಂತರವೇ ಸಂಯುಕ್ತ ಮಹಾರಾಷ್ಟ್ರದ ಕನಸು ನನಸಾಗಲಿದೆ. ಸಮಗ್ರ ಮಹಾರಾಷ್ಟ್ರದ ಕನಸನ್ನು ನನಸಾಗಿಸಲು ಇಡೀ ಮಹಾರಾಷ್ಟ್ರ ಒಗ್ಗಟ್ಟಿನಿಂದ ಹೋರಾಡಲಿದೆ ಎಂದು ಅಜಿತ್ ಪವಾರ್ ಹೇಳಿಕೊಂಡಿದ್ದಾರೆ.

ಫಡ್ನವೀಸ್ ಗೆ ಟ್ವೀಟ್ ನಲ್ಲಿ ತಿರುಗೇಟು ನೀಡಿದ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button