ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಿಡಿ ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ ರಮೇಶ ಜಾರಕಿಹೊಳಿ ಪತ್ರಿಕಾಗೋಷ್ಠಿ ನಡೆಸಿದರು.
ಸಿಡಿ ವಿಷಯ 4 ತಿಂಗಳ ಮೊದಲೇ ನನಗೆ ಗೊತ್ತಿತ್ತು. ಬೆಂಗಳೂರಿನ 2 ಅಪಾರ್ಟ್ ಮೆಂಟ್ ನಲ್ಲಿ ಕಾರ್ಯಾಚರಣೆ ನಡೆದಿತ್ತು. ಈ ಕುರಿತು ಸಹೋದರ ಬಾಲಚಂದ್ರ ಜಾರಕಿಹೊಳಿ ನನಗೆ ಕೇಳಿದ್ದರು. ಇಂತಹ ಪ್ರಕರಣದಲ್ಲಿ ನೀನು ಭಾಗಿಯಾಗಿದ್ದೆಯಾ ಎಂದು ಕೇಳಿದ್ದರು. ನಾನು ಇಲ್ಲ, ಅದು ನಕಲಿ ಸಿಡಿ ಎಂದು ಸ್ಪಷ್ಟವಾಗಿ ತಿಳಿಸಿದ್ದೆ ಎಂದು ಅವರು ಹೇಳಿದರು.
ಸಿಡಿ ಬಿಡುಗಡೆ ಕುರಿತು ಹೈಕಮಾಂಡ್ ನಿಂದ ಹಿತೈಷಿಗಳು ನನಗೆ 26 ಗಂಟೆ ಮೊದಲೇ ಪೊನ್ ಮಾಡಿ ತಿಳಿಸಿದ್ದರು. ನಾಳೆ 5 ರಿಂದ 6 ಗಂಟೆ ಮಧ್ಯೆ ನಿಮ್ಮ ಕುರಿತು ಸಿಡಿ ಬಿಡುಗಡೆಯಾಗಲಿದೆ. ಏನಾದರೂ ಕ್ರಮ ಕೈಗೊಳ್ಳುವುದಾದರೆ ತೆಗೆದುಕೊಳ್ಳಿ ಎಂದಿದ್ದರು. ಆದರೆ ನಾನು ಯಾವುದೇ ಕ್ರಮ ತಗೆದುಕೊಂಡಿಲ್ಲ. ಏಕೆಂದರೆ ನಾನು ತಪ್ಪು ಮಾಡಿಲ್ಲ ಎಂದು ನನಗೆ ಗೊತ್ತಿತ್ತು ಎಂದು ರಮೇಶ ಹೇಳಿದರು.
ನೀವು ಯಾವುದಕ್ಕೂ ಹೆದರಬೇಡಿ. ಧೈರ್ಯದಿಂದಿರಿ ಎಂದೂ ಹೈಕಮಾಂಡ್ ನನಗೆ ತಿಳಿಸಿತ್ತು. ರಾಜಿನಾಮೆ ಕೂಡ ನನ್ನದೇ ನಿರ್ಧಾರ. ಯಾರೂ ಹೇಳಿರಲಿಲ್ಲ ಎಂದು ಅವರು ತಿಳಿಸಿದರು.
ಈ ವಿಷಯದಲ್ಲಿ
ಸಿಡಿ ವಿಷಯ 4 ತಿಂಗಳ ಮೊದಲೇ ಗೊತ್ತಾಗಿತ್ತು, ಎಷ್ಟೇ ಖರ್ಚಾದರೂ ಜೈಲಿಗೆ ಹಾಕಿಸದೆ ಬಿಡಲ್ಲ – ರಮೇಶ ಜಾರಕಿಹೊಳಿ
ರಮೇಶ್ ವಿರುದ್ಧ ಷಡ್ಯಂತ್ರ; ಸಿಡಿಗೆ 15 ಕೋಟಿ ಖರ್ಚು; ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ