Kannada NewsKarnataka NewsNationalPolitics

*ಹಾಲಿನ ದರ ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಅವರ ಸಮರ್ಥನೆ ಏನು?*

ಪ್ರಗತಿವಾಹಿನಿ ಸುದ್ದಿ: ಸರ್ಕಾರ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ರೂ.4ರಂತೆ ಏರಿಕೆ ಮಾಡುವ ಮಾಡುತ್ತಿದಂತೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಎಕ್ಸ ಖಾತೆಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.

ರಾಜ್ಯದ ಲಕ್ಷಾಂತರ ಹೈನುಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಲ್ಲಿ ಹಾಗೂ ಗ್ರಾಹಕರಿಗೆ ಹೊರೆಯಾಗದ ರೀತಿಯಲ್ಲಿ ಪ್ರಸ್ತುತ ದರ ಏರಿಕೆ ನಿರ್ಧಾರವನ್ನು ರಾಜ್ಯ ಸರ್ಕಾರವು ಕೈಗೊಂಡಿದೆ. ರಾಷ್ಟ್ರದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ಅತ್ಯಂತ ಕಡಿಮೆಯಿದೆ.

ಮುಂಬರುವ ಏಪ್ರಿಲ್ 1ರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರವು ₹4 ಹೆಚ್ಚಳವಾಗಲಿದ್ದು, ಇದರಲ್ಲಿ ಸರ್ಕಾರ ಅಥವಾ ಕೆಎಂಎಫ್ ಸಂಸ್ಥೆಗೆ ಲಾಭಗಳಿಕೆ ಮಾಡಿಕೊಡುವ ಯಾವುದೇ ಉದ್ದೇಶವಿಲ್ಲ. ಇಲ್ಲಿ ಏರಿಕೆಯಾಗುವ ದರದ ಲಾಭವು ರೈತರನ್ನು ತಲುಪಲಿದೆ. ದರ ಏರಿಕೆಯ ನಂತರವೂ ಒಂದು ಲೀಟ‌ರ್ ಹಾಲಿನ ಬೆಲೆ ₹46 ಆಗಲಿದ್ದು, ಇದು ಬೇರೆಲ್ಲಾ ರಾಜ್ಯಗಳಿಂತಲೂ ಕಡಿಮೆ ಇದೆ. 

ಹಾಲಿನ ದರ ಹೆಚ್ಚಳ ಹೊರೆಯಲ್ಲಿ ಇದು ರೈತರ ನೆರವಿಗೆ ನಿಲ್ಲುವ ನಮ್ಮೆಲ್ಲರ ಹೊಣೆಗಾರಿಕೆ ಎಂದು ಅಭಿಪ್ರಾಯಪಟ್ಟಿರುವ ಸಿಎಂ, ನಾಡಿನ ಲಕ್ಷಾಂತರ ಹೈನುಗಾರರ ಬದುಕಿಗೆ ಬಲ ತುಂಬುವ ಏಕೈಕ ಉದ್ದೇಶದ ಈ ಪ್ರಯತ್ನಕ್ಕೆ ಸಾರ್ವಜನಿಕರು ಬೆಂಬಲವಾಗಿ ನಿಲ್ಲುತ್ತೀರೆಂಬ ವಿಶ್ವಾಸವಿದೆ ಎಂದಿದ್ದಾರೆ.

Home add -Advt

Related Articles

Back to top button