Kannada NewsKarnataka NewsNational

*ಹೆಂಡತಿಯನ್ನು ಕೊಲೆ ಮಾಡಿ ಎಸ್ಕೇಪ‌‌‌ ಆಗಿದ್ದ ಪತಿ ಪುಣೆಯಲ್ಲಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಹೆಂಡತಿಯನ್ನು ಕೊಲೆ ಮಾಡಿ ಸೂಟ್ ಕೇಸ್‌ನಲ್ಲಿ ತುಂಬಿ ಎಸ್ಕೆಪ್ ಆಗಿದ್ದ ಆರೋಪಿ ರಾಕೇಶ್‌ನನ್ನು ಬೆಂಗಳೂರಿನ ಹುಳಿಮಾವು ಪೊಲೀಸ್ರು ನೀಡಿದ ಮಾಹಿತಿ ಮೇರೆಗೆ ಪುಣೆ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. 

ಹುಳಿಮಾವು ಠಾಣೆ ವ್ಯಾಪ್ತಿಯ ದೊಡ್ಡಕಮ್ಮನಹಳ್ಳಿಯ ವಾಲ್ ಮಾರ್ಕ್ ಅಪಾರ್ಟೆಂಟ್ ಮುಂಭಾಗ ಈ ಘಟನೆ ಬೆಳಿಕಿಗೆ ಬಂದಿತ್ತು. ನಿನ್ನೆ ಮಧ್ಯಾಹ್ನ ಪತ್ನಿ ಗೌರಿಯನ್ನ ಹತ್ಯೆ ಮಾಡಿ ನಂತರ ದೇಹವನ್ನ ತುಂಡರಿಸಿ ಸೂಟ್‌ಕೇಸ್‌ನಲ್ಲಿ ತುಂಬಿ ಎಸ್ಕೆಪ್ ಆಗಿದ್ದ. ಅಕ್ಕಪಕ್ಕದವರಿಗೆ ವಾಸನೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದ್ರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ರು ಸೂಟ್ ಕೇಸ್ ಓಪನ್ ಮಾಡಿ ನೋಡಿದಾಗ ಗೌರಿ ಕತ್ತನ್ನ ಅರ್ಧ ಕೊಯ್ದು ಸೂಟ್ ಕೇಸ್‌ಗೆ ತುಂಬಿರೋದು ಬೆಳಕಿಗೆ ಬಂದಿದೆ.

Home add -Advt

ಕೊಲೆ ಮಾಡಿ ನಿನ್ನೆ ರಾತ್ರಿ 12.30ಕ್ಕೆ ರಸ್ತೆಯಲ್ಲಿ ಒಬ್ಬನೆ ನಡೆದುಕೊಂಡು ಹೋಗಿ ಅಪಾರ್ಟ್ ಮೆಂಟ್ ಒಂದರ ಬಳಿ ನಿಲ್ಲಿಸಿದ್ದ ಕಾರು ತೆಗೆದುಕೊಂಡು ರಾಕೇಶ್ ಎಸ್ಕೆಪ್ ಆಗಿದ್ದ. ರಾಕೇಶ್‌ಗೆ ಕೆಳಗಿನ ಮನೆಯವರು ಕಾಲ್ ಮಾಡಿದಾಗ ನನ್ನ ಹೆಂಡ್ತಿ ಕೊಲೆ ಮಾಡಿ ಸೂಟ್ ಕೇಸ್ ಗೆ ತುಂಬಿರೋದಾಗಿ ಹೇಳಿದ್ದಂತೆ.

ಕೆಳಗಿನ ಮನೆಯ ಬಾಡಿಗೆದಾರರು ಕೂಡಲೆ ಮನೆ ಮಾಲೀಕರಿಗೆ ಕರೆ ಮಾಡಿದ್ದಾರೆ. ಮನೆ ಮಾಲೀಕ ಮನೆ ಬಳಿ ಬಂದು ಸಂಜೆ 5.30 ಕ್ಕೆ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದಾರೆ. ಕತ್ತು ಮತ್ತು ಹೊಟ್ಟೆ ಕೊಯ್ದು ದೇಹ ಮಡಚಿಟ್ಟು ಸೂಟ್ ಕೇಸ್‌ಗೆ ತುಂಬಿದ್ದಾನೆ.

ಒಂದು ತಿಂಗಳ ಹಿಂದೆ ದೊಡ್ಡ ಕಮ್ಮನಹಳ್ಳಿಯ ಮನೆಗೆ ಬಾಡಿಗೆಗೆ ಬಂದಿದ್ದ ರಾಕೇಶ್ ದಂಪತಿ ಸಾಫ್ಟ್ ವೇ‌ರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ರಂತೆ. ಕೊಲೆಗೆ ಈವರೆಗೆ ಕಾರಣ ತಿಳಿದುಬಂದಿಲ್ಲ. ಸದ್ಯ ಪುಣೆ ಪೊಲೀಸರ ವಶದಲ್ಲಿರೋ ಆರೋಪಿಯನ್ನ ಕರೆತರಲು ಹುಳಿಮಾವು ಪೊಲೀಸ್ರು ಪುಣೆಗೆ ತೆರಳಿದ್ದಾರೆ.

Related Articles

Back to top button