ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಸೋಮವಾರ ರಾತ್ರಿ 9.09 ಗಂಟೆಯಿಂದ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ವಿಶ್ವದ ಹಲವು ಭಾಗಗಳಲ್ಲಿ ಸ್ಥಗಿತಗೊಂಡಿವೆ.
ಫೇಸ್‌ಬುಕ್ ಒಡೆತನದಲ್ಲಿರುವ ಈ ಮೂರು ಆ್ಯಪ್ ಗಳು ಕೆಲಸ ಮಾಡದೆ ಕೋಟ್ಯಂತರ ಬಳಕೆದಾರರು ಪರದಾಡುವಂತಾಗಿದೆ.
ಸುಮಾರು 80 ಸಾವಿರ ವಾಟ್ಸಪ್ ಬಳಕೆದಾರರು ಮತ್ತು 50 ಸಾವಿರ ಫೋಸ್ ಬುಕ್ ಬಳಕೆದಾರರು ಈಗಾಗಲೆ ತಮ್ಮ ದೂರು ಮತ್ತು ಅಸಮಾಧಾನ ತೋಡಿಕೊಂಡು ಕಂಪನಿಗೆ ಸಂದೇಶ ಕಳಿಸಿದ್ದಾರೆ.
ಸಮಸ್ಯೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಸರಿಪಡಿಸುವ ಕೆಲಸ ನಡೆಯುತ್ತಿದೆ. ಆದಷ್ಟು ಬೇಗ ಸರಿಯಾಗಲಿದೆ. ನಿಮ್ಮ ತಾಳ್ಮೆಗೆ ಧನ್ಯವಾದಗಳು ಎಂದು ಕಂಪನಿ ಹೇಳಿಕೆ ಬಿಡುಗಡೆ ಮಾಡಿದೆ.
ಆದರೆ ಸುಮಾರು ಎರಡೂವರೆ ಗಂಟೆಯ ಬಳಿಕವೂ, ರಾತ್ರಿ 12.20ರವರೆಗೂ ವಾಟ್ಸ್ಪ್, ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಂ ಕೆಲಸ ಪುನರಾರಂಭಿಸಿಲ್ಲ.
6 ತಿಂಗಳ ಹಿಂದೆ ಸಹ ಸುಮಾರು ಮುಕ್ಕಾಲು ಗಂಟೆ ಫೇಸ್ ಬುಕ್ ಡೌನ್ ಆಗಿತ್ತು.
ನಟ ಶಾರುಖ್ ಪುತ್ರ ಆರ್ಯನ್ ಖಾನ್ ಮತ್ತೆ ಎನ್ ಸಿಬಿ ಕಸ್ಟಡಿಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ