Latest

ಪುನೀತ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಯಾರಿಗೆಲ್ಲ ಅವಕಾಶ? ಇಲ್ಲಿದೆ ಮಾಹಿತಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –  ಪುನೀತ್ ರಾಜ್ ಕುಮಾರ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಕುಟುಂಬದ ಸದಸ್ಯರು ಹಾಗೂ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಕುಟುಂಬದವರ ಇಚ್ಛೆಯಂತೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆಗೆ ಕುಟುಂಬದ ಸದಸ್ಯರು ಹಾಗೂ ಕೆಲವು ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.

ಮಾಧ್ಯಮದವರಿಗೆ ಇಂದು ಈ ಬಗ್ಗೆ ಮಾಹಿತಿ ನೀಡಿದ ಅವರು, ಕಂಠೀರವ ಕ್ರೀಡಾಂಗಣದಿಂದ ಪಾರ್ಥಿವ ಶರೀರದ ಮೆರವಣಿಗೆ ನಾಳೆ ಬೆಳಿಗ್ಗೆ 5.30 ರಿಂದ 6.30ರ ವೇಳೆಗೆ ಹೊರಟು ಕಂಠೀರವ ಸ್ಟುಡಿಯೋಕ್ಕೆ ತಲುಪಲಿದೆ ಎಂದರು.

ಸ್ಟುಡಿಯೋದೊಳಗೆ ಸ್ಥಳಾವಕಾಶ ಕಡಿಮೆ ಇರುವುದರಿಂದ ಸಾರ್ವಜನಿಕರಿಗೆ ಅವಕಾಶವಿರುವುದಿಲ್ಲ. ಹಾಲು ತುಪ್ಪ ಕಾರ್ಯ ನೆರವೇರಿದ ಮೇಲೆ ಸೂಕ್ತ ವ್ಯವಸ್ಥೆಗಳನ್ನು ಹಾಗೂ ಸುರಕ್ಷತೆ ಕಲ್ಪಿಸಿದ ನಂತರ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

Home add -Advt

ಆಸ್ಪತ್ರೆ ಹಾಗೂ ಕ್ರೀಡಾಂಗಣದಲ್ಲಿ ಪುನೀತ್ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸುವ ವೇಳೆ ನಾಡಿನ ಮಹಾಜನತೆ ಹಾಗೂ ಪುನೀತ್ ಅವರ ಅಭಿಮಾನಿ ಬಂಧುಗಳು ಸಂಯಮ, ಶಾಂತಿ ಮತ್ತು ಶಿಸ್ತಿನಿಂದ ನಡೆದುಕೊಂಡಿದ್ದಕ್ಕಾಗಿ ರಾಜ್ಯದ ಮಹಾಜನತೆಗೆ ಮುಖ್ಯಮಂತ್ರಿಗಳು ಕೃತಜ್ಞತೆಗಳನ್ನು ಸಲ್ಲಿಸಿದರು.

ಪುನೀತ್ ಅಂತ್ಯಕ್ರಿಯೆ ನಾಳೆ ನಡೆಸಲು ನಿರ್ಧಾರ; ಸಿಎಂ ಬೊಮ್ಮಾಯಿ

Related Articles

Back to top button