Latest

ಅಪ್ಪನ ಸ್ಥಿತಿ ಕಂಡು ಬಿಕ್ಕಿಬಿಕ್ಕಿ ಅತ್ತ ಪುತ್ರಿ; ಪುನೀತ್ ಅಂತಿಮ ದರ್ಶನ ಪಡೆದ ಮಗಳು ಧೃತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾಗಿರುವ ನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ ಪಡೆಯಲು ಮಗಳು ಧೃತಿ ಅಮೆರಿಕಾದಿಂದ ಆಗಮಿಸಿದ್ದು, ತಂದೆಯ ಪಾರ್ಥಿವ ಶರೀರ ನೋಡುತ್ತಿದ್ದಂತೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಅಮೆರಿಕಾದಿಂದ ಆಗಮಿಸಿದ ಪುನೀತ್ ಪುತ್ರಿ ಧೃತಿ, ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದು, ತಂದೆಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ತಂದೆಯ ತಲೆ ಮುಟ್ಟಿ ನಮಸ್ಕರಿಸಿದ ಧೃತಿ ದು:ಖ ತಡೆದುಕೊಳ್ಳಲಾರದೇ ಗಳಗಳನೇ ಕಣ್ಣೀರಿಟ್ಟಿದ್ದಾರೆ. ಬಳಿಕ ತಾಯಿಯನ್ನು ತಬ್ಬಿಕೊಂಡು ಇಬ್ಬರು ಮಕ್ಕಳು ಕಣ್ಣೀರಾಗಿದ್ದಾರೆ.

ಕಂಠೀರವ ಸ್ಟೇಡಿಯಂ ನಲ್ಲಿ ಡಾ.ರಾಜ್ ಕುಮಾರ್ ಕುಟುಂಬದ ಆಕ್ರಮಂದನ ಮುಗಿಲುಮುಟ್ಟಿದ್ದು, ಪುನೀತ್ ಮಕ್ಕಳಾದ ವಂದಿತಾ ಹಾಗೂ ಧೃತಿ ತಾಯಿಯ ಹೆಗಲಿಗೊರಗಿ ಕಣ್ಣೀರಿಟ್ಟಿದ್ದಾರೆ.
ಪುನೀತ್ ಅಂತ್ಯಕ್ರಿಯೆ ನಾಳೆ ನಡೆಸಲು ನಿರ್ಧಾರ; ಸಿಎಂ ಬೊಮ್ಮಾಯಿ

Related Articles

Back to top button