*ಎನ್‍ಡಿಎ ಸರ್ಕಾರ 15 ದಿನವ ಇರುತ್ತೊ ಇಲ್ವೋ ಯಾರಿಗೆ ಗೊತ್ತು: ಮಮತಾ ಬ್ಯಾನರ್ಜಿ*

ಪ್ರಗತಿವಾಹಿನಿ ಸುದ್ದಿ: ನರೇಂದ್ರ ಮೋದಿ ಅವರು ಇಂದು ಮೂರನೇ ಬಾರಿಗೆ ಪ್ರಮಾಣ ಸ್ವೀಕರಿಸಲಿದ್ದು, ಪಶ್ಚಿಮ ಬಂಗಾಳ ಮುಖ್ಯಂಮತ್ರಿ ಮಮತಾ ಬ್ಯಾನರ್ಜಿ ಅವರು ಕೌಂಟರ್ ಕೊಟ್ಟಿದ್ದಾರೆ.
ಕೆಲವೊಮ್ಮೆ ಸರ್ಕಾರಗಳು ಒಂದು ದಿನ ಮಾತ್ರ ಇರುತ್ತವೆ. ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳ ಗೆಲುವಿನ ಬಗ್ಗೆ ಮಾತನಾಡುವವರಿಗೆ ಸ್ವಂತವಾಗಿ ಸರಳ ಬಹುಮತವನ್ನು ಪಡೆಯಲು ಸಾಧ್ಯವಾಗಲಿಲ್ಲ. ಏನು ಬೇಕಾದರೂ ಆಗಬಹುದು. ಎನ್‍ಡಿಎ ಸರ್ಕಾರ 15 ದಿನವಾದರೂ ಇರುತ್ತದೋ ಇಲ್ವೋ ಯಾರಿಗೆ ಗೊತ್ತು ಎಂದು ಟಿಎಂಸಿ ನಾಯಕಿ ಮಮತಾ ವ್ಯಂಗ್ಯವಾಡಿದ್ದಾರೆ.
ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನಮಗೆ ಆಹ್ವಾನ ಬಂದಿಲ್ಲ. ನಾವು ಹೋಗುದಿಲ್ಲ ಎಂದಿದ್ದಾರೆ. ಇಂದು ನಡೆಯುತ್ತಿರುವ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಕಾನೂನುಬಾಹಿರವಾಗಿದೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಸರ್ಕಾರ ರಚಿಸುತ್ತಿರುವ ಕಾರಣದಿಂದ ನಾವು ಅವರಿಗೆ ಶುಭಾಶಯಗಳನ್ನು ಕೋರಲು ಸಾಧ್ಯವಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ 22 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ ಸಂಖ್ಯೆ 18ರಿಂದ 12ಕ್ಕೆ ಇಳಿದಿದೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ