Politics

*ಮೋದಿ ಸಂಪುಟದಲ್ಲಿ ಮಂತ್ರಿ ಸ್ಥಾನ: ಸಂತಸ ಹಂಚಿಕೊಂಡ HDK ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಮಾಜಿ ಸಿಎಂ, ನೂತನ ಸಂಸದ ಕುಮಾರಸ್ವಾಮಿಯವರಿಗೂ ಅವಕಾಶ ಸಿಕ್ಕಿದ್ದು, ಕುಮಾರಸ್ವಾಮಿ ಇಂದು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Home add -Advt

ಈ ಬಗ್ಗೆ ಸ್ವತಃ ಸಂತಸ ಹಂಚಿಕೊಂಡಿರುವ ಕುಮಾರಸ್ವಾಮಿ, ನಮ್ಮ ಈ ಗೆಲುವು ಕರ್ನಾಟಕ ಜನತೆ ಸಲ್ಲಬೇಕು. ನರೇಂದ್ರ ಮೋದಿಯವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅವರ ನಂಬಿಕೆ ಉಳಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ನನಗೆ ಕೃಷಿ ಖಾತೆ ಸಿಕ್ಕರೆ ಸಂತೋಷ. ರೈತರಿಗಾಗಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ನಾನು ಇದೇ ಖಾತೆ ಬೇಕು ಎಂದು ಒತ್ತಡ ಹೇರಿಲ್ಲ. ಯಾವ ಖಾತೆ ನೀಡಬೇಕು ಎಂಬುದು ಮೋದಿಯವರಿಗೆ ಬಿಟ್ಟ ವಿಚಾರ ಎಂದು ಹೇಳಿದರು. ಇನ್ನು ರಾಜ್ಯದಲ್ಲಿ ಜೆಡಿಎಸ್ ಗೆ ಪುನಶ್ಚೇತನ ಸಿಕ್ಕಿದೆ. ವಿಶೇಷವಾಗಿ ನನ್ನ ಮಂಡ್ಯ ಕ್ಷೇತ್ರದ ಜನತೆಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.


Related Articles

Back to top button