Kannada NewsLatest
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರನ್ನು ಯುಎಸ್ ಅಧ್ಯಕ್ಷ ಜೋ ಬಿಡೆನ್ ‘ಗೇಮ್ ಚೇಂಜ್’ ಎಂದಿದ್ದೇಕೆ?
ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರನ್ನು ‘ಗೇಮ್ ಚೇಂಜ್’ ಎಂದು ಕರೆದಿದ್ದಾರೆ.
ಈ ಕುರಿತು X ನಲ್ಲಿ ಈ ಆರ್ಥಿಕ ಕಾರಿಡಾರ್ ನಾಲ್ಕು ಪ್ರಯೋಜನಗಳನ್ನು ಪಟ್ಟಿ ಮಾಡಿ ಅವರು ಹಂಚಿಕೊಂಡಿದ್ದಾರೆ.
ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್‌ಗಾಗಿ ಯುಎಸ್, ಭಾರತ, ಸೌದಿ ಅರೇಬಿಯಾ, ಯುಎಇ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಇಯು ‘ಐತಿಹಾಸಿಕ ಒಪ್ಪಂದ’ ಅಂತಿಮಗೊಳಿಸಿವೆ. ಇದು ‘ಗೇಮ್ ಚೇಂಜಿಂಗ್ ಪ್ರಾದೇಶಿಕ ಹೂಡಿಕೆ’ ಎಂದು ಜೋ ಬಿಡನ್ ಹೇಳಿದ್ದಾರೆ.
ಇದು ಎರಡು ಖಂಡಗಳಾದ್ಯಂತ ಬಂದರುಗಳು, ಪ್ರಮುಖ ಸೇತುವೆಗಳ ನಿರ್ಮಾಣ, ವ್ಯಾಪಾರದ ಸುಲಭೀಕರಣ, ಸ್ಥಿರ ಇಂಟರ್ನೆಟ್‌ಗಾಗಿ ಕೇಬಲ್‌ಗಳ ಅಳವಡಿಕೆ, ಸುಸ್ಥಿರ ಮತ್ತು ಅಂತರ್ಗತ ಆರ್ಥಿಕ ಬೆಳವಣಿಗೆಯ ಅವಕಾಶಗಳು ತೆರೆದುಕೊಳ್ಳುವಂತೆ ಮಾಡುತ್ತದೆ ಎಂದು ಜೋ ಬಿಡೆನ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ