Karnataka News

*ಪತ್ನಿ ಕೊಲೆಗೈದು ಅಂತ್ಯಕ್ರಿಯೆ ಮಾಡುತ್ತಿದ್ದ ವೇಳೆ ಸ್ಮಶಾನಕ್ಕೆ ಎಂಟ್ರಿಕೊಟ್ಟ ಪೊಲೀಸರು: ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಪತ್ನಿಯನ್ನು ಹತ್ಯೆಗೈದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದಾಗಲೇ ಪೊಲೀಸರು ಪತಿ ಮಹಾಶಯನನ್ನು ಬಂಧಿಸಿರುವ ಘಟನೆ ಬೆಂಗಳೂರು ಗ್ರಮಾಂತರ ಜಿಲ್ಲೆ ದೊಡ್ದಬಳ್ಳಾಪುರ ತಾಲೂಕಿನ ನೇರಳೆಘಟ್ಟದಲ್ಲಿ ನಡೆದಿದೆ.

ರಾಧಮ್ಮ (45) ಕೊಲೆಯಾದ ಪತ್ನಿ. ಲಕ್ಷ್ಮಣಯ್ಯ ಪತ್ನಿಯನ್ನೇ ಕೊಂದ ಪತಿ. ಲಕ್ಷ್ಮಣಯ್ಯ ಕುಡಿದು ಬಂದು ಪತ್ನಿ ಜೊತೆ ಜಗಳವಾಡುತ್ತಿದ್ದ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಗಲಾಟೆ ವೇಳೆ ಪತ್ನಿ ರಾಧಮ್ಮಳ ತಲೆಯನ್ನು ಗೋಡೆಗೆ ಗುದ್ದಿ ಸಾಯಿಸಿಯೇಬಿಟ್ಟಿದ್ದಾನೆ.

ಕೊಲೆ ಬಳಿಕ ಮಾಹಿತಿ ನೀಡದೇ ಪ್ರಕರಣ ಮುಚ್ಚಿ ಹಾಕಲು ಕುಟುಂಬದವರೂ ಸಾಥ್ ನೀಡಿದ್ದಾರೆ. ಶವವನ್ನು ಸ್ಮಶಾನಕ್ಕೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲು ಲಕ್ಷ್ಮಣಯ್ಯ ಸಿದ್ಧತೆ ನಡೆಸಿದ್ದಾನೆ. ಈ ವೇಳೆ ಸ್ಮಶಾನಕ್ಕೆ ಎಂಟ್ರಿಯಾದ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button