National

*ಹೆಣ್ಣುಮಗುವಿಗೆ ಜನ್ಮ ನೀಡಿದ್ದಕ್ಕೆ ಪತ್ನಿಯನ್ನೇ ಬೆಂಕಿ ಹಚ್ಚಿ ಕೊಂದ ಪತಿ*

ಪ್ರಗತಿವಾಹಿನಿ ಸುದ್ದಿ: ಹೆಣ್ಣುಮಗು ಹೆತ್ತಿದ್ದಕ್ಕೆ ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದಿರುವ ಘಟನೆ ಮಹಾರಾಷ್ಟ್ರದ ಗಂಗಾಖೇಡ್ ನಾಕಾದಲ್ಲಿ ನಡೆದಿದೆ.

ಕುಂಡ್ಕ್ ಉತ್ತಮ್ ಕಾಳೆ ಪತ್ನಿಯನ್ನೇ ಕೊಂದ ಪತಿ. ಮೈನಾ ಪತಿಯಿಂದಲೇ ಕೊಲೆಯಾಗಿರುವ ಬಾಣಂತಿ. ಮೂರನೆಯದೂ ಹೆಣ್ಣುಮಗು ಎಂದು ಪತ್ನಿಯ ಮೇಲೆ ಪೆಟ್ರೋಲ್ ಸುರಿದ ಕುಂಡ್ಲಿಕ್ ಉತ್ತಮ್, ಬೆಂಕಿ ಹಚ್ಚಿದ್ದಾನೆ.

ಮೈನಾ ಕೂಗಾಡುತ್ತಾ ಮನೆಯಿಂದ ಹೊರಗೋಡಿಬಂದಿದ್ದಾಳೆ. ನೆರೆಹೊರೆಯವರು ಬೆಂಕಿ ನಂದಿಸಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆಯೇ ಮಹಿಳೆ ಸಾವನ್ನಪ್ಪಿದ್ದಾರೆ. ಮೂರನೆಯದೂ ಹೆಣ್ಣು ಹೆತ್ತರೆ ನಿನ್ನನ್ನು ಜೀವಂತ ಬಿಡಲ್ಲ ಎಂದು ಪತಿ ಈ ಹಿಂದಿನಿಂದಲೂ ಬೆದರಿಕೆ ಹಾಕುತ್ತಿದ್ದನಂತೆ. ಇದೀಗ ಮೂರನೆಯ ಹೆಣ್ಣುಮಗು ಹುಟ್ಟುತ್ತಿದಂತೆ ಪತ್ನಿಯನ್ನು ಭೀಕರವಾಗಿ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾನೆ.

ಗಂಗಾಖೇಡ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ, ತನಿಖೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button