ಮಹಿಳಾ ಪೊಲೀಸ್ ಪ್ರೀತಿಗಾಗಿ ಹೆಂಡತಿ ಮಕ್ಕಳನ್ನೇ ಕೊಂದು ಹೂತ; ಸತ್ತು ಹೋಗಿದ್ದ ವ್ಯಕ್ತಿ ಎದ್ದುಬಂದಿದ್ದು ಹೇಗೆ..?
ಪ್ರಗತಿವಾಹಿನಿ ಸುದ್ದಿ; ಲಕ್ನೋ: ಮಹಿಳಾ ಪೊಲೀಸ್ ಪ್ರೇಮಪಾಶಕ್ಕೆ ಬಿದ್ದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಮನೆಯಲ್ಲಿಯೇ ಹೂತು ಹಾಕಿದ್ದ ಘಟನೆ ಉತ್ತರ ಪ್ರದೇಶದ ಕಸಗಂಜ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮೂರು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇದೀಗ ಕೊಲೆಗಾರ ಹಾಗೂ ಆತನ ಪ್ರೇಯಸಿ ಲೇಡಿ ಪೊಲೀಸ್ ಹಾಗೂ ಆತನ ತಂದೆ ನಿವೃತ್ತ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಲೇಡಿ ಪೊಲೀಸ್ ಪ್ರೀತಿಗಾಗಿ 2018ರಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಮನೆಯ ಬೇಸ್ ಮೆಂಟ್ ನಲ್ಲಿಯೇ ಹೂತು ಹಾಕಿದ್ದ 34 ವರ್ಷದ ರಾಕೇಶ್ ತನ್ನ ಸ್ನೇಹಿತನನ್ನೂ ಕೊಂದು ಮುಖದ ಗುರುತು ಸಿಗದಂತೆ ಕಲ್ಲಿನಿಂದ ಜಜ್ಜಿ ಕೊಲೆಯಾದ ವ್ಯಕ್ತಿ ತಾನೇ ಎಂದು ಬಿಂಬಿಸಿ ಹರಿಯಾಣದಲ್ಲಿ ಪ್ರೇಯಸಿಯೊಂದಿಗೆ ತಲೆಮರೆಸಿಕೊಂಡಿದ್ದ.
ಖಾಸಗಿ ಲ್ಯಾಬ್ ನಲ್ಲಿ ಪ್ಯಾಥಾಲಾಜಿಸ್ಟ್ ಆಗಿದ್ದ ರಾಕೇಶ್ ಪಕ್ಕಾ ಪ್ಲಾನ್ ಮಾಡಿ ತನ್ನ ಪ್ರೇಯಸಿ ಲೇಡಿ ಪೊಲೀಸ್ ಸಹಾಯದೊಂದಿಗೆ ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಮನೆ ಬೇಸ್ ಮೆಂಟ್ ನಲ್ಲಿ ಸಮಾಧಿ ಮಾಡಿ, ಮೇಲಿಂದ ಸಿಮೆಂಟ್ ನಿಂದ ಮುಚ್ಚಿ ಯಾರಿಗೂ ಗೊತ್ತಾಗದಂತೆ ನೋಡಿಕೊಂಡಿದ್ದ. ಮಗನ ದುಷ್ಕೃತ್ಯಕ್ಕೆ ನಿವೃತ್ತ ಪೊಲೀಸ್ ಸಿಬ್ಬಂದಿಯಾಗಿದ್ದ ತಂದೆಯೂ ಸಾಥ್ ನೀಡಿದ್ದ ಎನ್ನಲಾಗಿದೆ. ಮಗಳು ಹಾಗೂ ಇಬ್ಬರು ಮೊಮ್ಮಕ್ಕಳ ಸುಳಿವಿಲ್ಲದ ಕಾರಣ ಅಳಿಯನ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕಿಡ್ನಾಪ್ ಕೇಸ್ ದಾಖಲಿಸಿದ್ದರು. ಪ್ರಕರಣದ ತನಿಖೆಗೆ ಮುಂದಾದ ಪೊಲೀಸರು ಮೂರು ವರ್ಷದ ಬಳಿಕ ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರು ತನ್ನ ಬೆನ್ನು ಹತ್ತಿದ್ದು, ಪ್ರಕರಣ ಬಯಲಾಗುತ್ತದೆ ಎಂಬ ಭೀತಿಯಿಂದ ತಾನೇ ಕೊಲೆಯಾಗಿದ್ದಾಗಿ ನಾಟಕ ಮಾಡಲು ಸ್ನೇಹಿತನನ್ನು ಕೊಂದು ಗುರುತು ಸಿಗದಂತೆ ಆತನ ಮುಖವನ್ನು ಜಜ್ಜಿ ಶವಕ್ಕೆ ತನ್ನದೇ ಬಟ್ಟೆ ಹಾಕಿ, ರಸ್ತೆ ಬದಿ ಬಿಸಾಕಿದ್ದ. ಬಳಿಕ ಅಲ್ಲಿಯೇ ತನ್ನ ಐಡಿ ಕಾರ್ಡನ್ನೂ ಬಿಸಾಕಿ ಪ್ರೇಯಸಿ ಹಾಗೂ ತನ್ನ ತಂದೆಯೊಂದಿಗೆ ಹರಿಯಾಣಾಗೆ ಹೋಗಿ ತಲೆಮರೆಸಿಕೊಂಡಿದ್ದ. ಮೃತ ಸ್ನೇಹಿತನ ಶವದ ಗುರುತು ಸಿಗದಿದ್ದಾಗ ಅನುಮಾನಗೊಂಡ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯಲ್ಲಿ ಅದು ಆರೋಪಿ ರಾಕೇಶ್ ಶವವಲ್ಲ ಎಂದು ಗೊತ್ತಾಗಿತ್ತು. ಹೀಗಾಗಿ ಡಿಎನ್ ಎ ಪರೀಕ್ಷೆ ನಡೆಸಿದಾಗ ಆತನ ಸ್ನೇಹಿತನ ಶವ ಎಂಬುದು ಗೊತ್ತಾಗಿದೆ. ಆರೋಪಿಗಳ ಪತ್ತೆಗಾಗಿ ಎರಡು ವರ್ಷಗಳಿಂದ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಈಗ ಹರಿಯಾಣದಲ್ಲಿ ಬಂಧಿಸಿದ್ದಾರೆ.
ಕಾನ್ಸ್ ಟೇಬಲ್ ಜೊತೆ ಪತ್ನಿ ಕಳ್ಳಾಟ; ಪೊಲೀಸ್ ಪೇದೆಯನ್ನು ಕಟ್ಟಿಹಾಕಿ ಥಳಿಸಿದ ಪತಿ
ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ: ಅಮಿತ್ ಷಾ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ