Latest

ಭೀಕರ ಬರಗಾಲ, ಹವಾಮಾನ ವೈಪರೀತ್ಯ: ವನ್ಯಜೀವಿಗಳು ಎತ್ತಂಗಡಿ

ಪ್ರಗತಿವಾಹಿನಿ ಸುದ್ದಿ, ಹರಾರೆ: ಭೀಕರ ಬರಗಾಲ ಮತ್ತು ಹವಾಮಾನ ವೈಪರೀತ್ಯ ದಕ್ಷಿಣ ಜಿಂಬಾಬ್ವೆಯ ಸ್ಥಿತಿಗತಿಗಳನ್ನೇ ಬದಲಿಸಿದೆ. ತೊಟ್ಟು ನೀರಿಗಾಗಿ ತಹತಹಿಸುವ ಸ್ಥಿತಿ ಬಂದೊದಗಿದೆ. ದಕ್ಷಿಣ ಭಾಗದ ಕಾಯ್ದಿಟ್ಟ ಅರಣ್ಯ ಪ್ರದೇಶಗಳಲ್ಲಿ ಆನೆಗಳಿಂದ ಹಿಡಿದು ಸಣ್ಣ ಪ್ರಾಣಿಗಳವರೆಗೆ ಹಲವು ಅಲ್ಲಲ್ಲಿ ಸತ್ತುಬಿದ್ದು ಜೀರ್ಣಾವಸ್ಥೆ ತಲುಪುತ್ತಿವೆ. ಇಡೀ ಪರಿಸರ ದುರ್ಗಂಧಮಯವಾಗಿದ್ದು ಬದುಕು ದುರ್ಭರವಾಗಿದೆ.

ಇಂಥ ಸ್ಥಿತಿಯಲ್ಲಿ  ಅಲ್ಲಿನ 2,500 ಕ್ಕೂ ಹೆಚ್ಚು ಕಾಡು ಪ್ರಾಣಿಗಳನ್ನು ದಕ್ಷಿಣದ  ಕಾಯ್ದಿಟ್ಟ ಅರಣ್ಯ ಪ್ರದೇಶದಿಂದ ಉತ್ತರಕ್ಕೆ ಸ್ಥಳಾಂತರಿಸಲು ಪ್ರಾರಂಭಿಸಿದೆ.

ಸುಮಾರು 2,000 ಇಂಪಾಲಾಗಳು, 400 ಆನೆಗಳು, 70 ಜಿರಾಫೆಗಳು, 50 ಕಾಡಾನೆಗಳು, 50 ಜೀಬ್ರಾಗಳು, 10 ಸಿಂಹಗಳು ಮತ್ತು 50 ಎಲ್ಯಾಂಡ್‌ಗಳು ಸಾಗಣೆಯಾಗುತ್ತಿರುವ ಪ್ರಾಣಿಗಳಲ್ಲಿ ಸೇರಿವೆ. ಈ ಪ್ರಾಣಿಗಳನ್ನು ಜಾಂಬೆಜಿ ನದಿ ಕಣಿವೆಯಲ್ಲಿರುವ  ವನ್ಯಜೀವಿ ಸಂರಕ್ಷಣಾ ವಲಯಗಳಿಗೆ ಕಳುಹಿಸಲಾಗುತ್ತಿದೆ.

ವಿಶೇಷವಾದ ವನ್ಯಜೀವಿ ಸಾಗಾಟದ ವಾಹನಗಳನ್ನು ಇದಕ್ಕಾಗಿ ಬಳಕೆ ಮಾಡಲಾಗುತ್ತಿದ್ದು ಆನೆಯಂಥ ಬೃಹದಾಕಾರದ ಜೀವಿಗಳನ್ನು ಕ್ರೇನ್ ಗಳನ್ನು ಬಳಸಿ ವಾಹನಗಳಿಗೆ ಹತ್ತಿಸಲಾಗುತ್ತಿದೆ. ಇದಕ್ಕಾಗಿ ಅಲ್ಲಿನ ಅರಣ್ಯ ಸಿಬ್ಬಂದಿ ಜೊತೆ ವನ್ಯಜೀವಿ ಸಂರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎನ್ ಜಿಒಗಳ ಕಾರ್ಯಕರ್ತರು ಕೈಜೋಡಿಸಿದ್ದಾರೆ.

ಪ್ರಧಾನಿ ಮೋದಿ ಆಹಾರದ ಖರ್ಚು ನೋಡಿಕೊಳ್ಳುತ್ತಿರುವುದು ಯಾರು?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button