ಪ್ರಗತಿವಾಹಿನಿ ಸುದ್ದಿ, ಬೆಂಗಳೂರು- ನಿರ್ಣಾಯಕ ವಿಧಾನಮಂಡಳದ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಮೈತ್ರಿ ಪಕ್ಷಗಳಿಗೆ ಉಳಿದಿರುವುದು ಎರಡೇ ದಾರಿ. ಸರಕಾರವನ್ನು ಉಳಿಸಿಕೊಳ್ಳಲು ಹೋರಾಡಿ ಸೋಲುುವುದು ಇಲ್ಲವೇ ಮೊದಲೇ ರಾಜಿನಾಮೆ ನೀಡಿ ಹೊರಹೋಗುವುದು.
ಸಧ್ಯದ ಪರಿಸ್ಥಿತಿಯಲ್ಲಿ ಸರಕಾರ ಉಳಿಸಿಕೊಳ್ಳುವ ಎಲ್ಲ ದಾರಿಗಳೂ ಮುಚ್ಚಿರುವಂತೆ ಕಾಣುತ್ತಿದೆ. ಯಾವಾಗ ಎಲ್ಲ ಶಾಸಕರೂ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದರೋ ಅಲ್ಲಿಗೇ ಅವರು ವಾಪಸ್ ಬರುವುದು ಅಸಾಧ್ಯ ಎನ್ನುವುದು ಅರ್ಥವಾಗಿದೆ. ಹಾಗಾಗಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಸೋಲುವುದಕ್ಕಿಂತ ರಾಜಿನಾಮೆ ನೀಡಿ ಹೊರಗೆ ಬರುವುದೇ ಉತ್ತಮ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಇಂದಿನ ಅಧಿವೇಶನ ಗದ್ದಲದಲ್ಲೇ ಮುಕ್ತಾಯವಾಗಿ, ನಾಳೆಯ ಸುಪ್ರಿಂ ಕೋರ್ಟ್ ನಿರ್ಣಯದವರೆಗೆ ಮೈತ್ರಿ ಸರಕಾರ ಕಾಯಬಹುದು. ಸದನ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಬಹುದು. ಬೆಂಗಳೂರಿನ ರೆಸಾರ್ಟ್ ಗಳಲ್ಲಿದ್ದ ಶಾಸಕರೆಲ್ಲಿ ವಿಧಾನಸೌಧದತ್ತ ಆಗಮಿಸುತ್ತಿದ್ದಾರೆ. ಮುಂಬೈ ಶಾಸಕರು ಅಧಿವೇಶನಕ್ಕೆ ಬರುವುದಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ