Kannada NewsKarnataka News

BJP ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ತಿರಸ್ಕೃತವಾಗುತ್ತಾ?

ಪ್ರಗತಿವಾಹಿನಿ ಸುದ್ದಿ, ಸವದತ್ತಿ: ಸವದತ್ತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ನಾಮಪತ್ರ ತಿರಸ್ಕೃತವಾಗುತ್ತಾ? ಅಂತಹ ಚರ್ಚೆ ಕ್ಷೇತ್ರದಲ್ಲಿ ಜೋರಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಮತ್ತು ಆಪ್ ಅಭ್ಯರ್ಥಿ ಬಾಪುಗೌಡ ಎನ್ನುವವರು ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಇಂತಹ ಆತಂಕ ಮತ್ತು ಚರ್ಚೆ ನಡೆಯುತ್ತಿದೆ. ರತ್ನಾ ಮಾಮನಿ ನಾಮಪತ್ರ ಸಲ್ಲಿಸುವಾಗ 2018ರ ಅಫಿಡವಿಟ್ ನ್ನು ಸಲ್ಲಿಸಿದ್ದಾರೆ. ಹಾಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ದೂರುದಾರರು ಕೋರಿದ್ದರು.

ಈ ಕುರಿತು ವಿಚಾರಣೆಯನ್ನು ಶನಿವಾರ ಬೆಳಗ್ಗೆ 10 ಗಂಟೆಗೆ ಇಟ್ಟುಕೊಳ್ಳಲಾಗಿದೆ. ವಿಚಾರಣೆಯ ನಂತರ ನಾಮಪತ್ರ ಸ್ವೀಕರಿಸಬೇಕೋ, ತಿರಸ್ಕರಿಸಬೇಕೋ ಎನ್ನುವ ತೀರ್ಮಾನವನ್ನು ಚುನಾವಣಾಧಿಕಾರಿಗಳು ಕೈಗೊಳ್ಳಲಿದ್ದಾರೆ.

ಮಾಹಿತಿಯ ಪ್ರಕಾರ ನಾಳೆ ವಿಚಾರಣೆ ಆರಂಭವಾಗುವವರೆಗೂ ಅವರು ಹೊಸದಾದ ಅಫಿಡವಿಟ್ ಅಪ್ ಲೋಡ್ ಮಾಡಲು ಅವಕಾಶವಿದೆ. ಹಾಗಾಗಿ ಅಂತಹ ಆತಂಕವೇನೂ ಇಲ್ಲ.

Home add -Advt

https://pragati.taskdun.com/sunil-patil-and-supporters-for-bjp/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button