Latest

ವಾರ ಪೂರ್ತಿ ಸೇಮಿ ಲಾಕ್ ಡೌನ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುವ ಬದಲು ದಿನದಿಂದ ದಿನಕ್ಕೆ ಆತಂಕಕಾರಿಯಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೀಕ್ ಎಂಡ್ ಕರ್ಫ್ಯೂ ಮಾದರಿಯ ಲಾಕ್ ಡೌನ್ ಮುಂದಿನ ಕೆಲವು ವಾರಪೂರ್ತಿ ಮುಂದುವರಿಯುವ ಸಾಧ್ಯತೆ ಇದೆ.

ಬಿಬಿಎಂಪಿ ಅಧಿಕಾರಿಗಳು ಈ ಕುರಿತು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದು, ಅದು ಬೆಂಗಳೂರಿಗೆ ಮಾತ್ರ ಅನ್ವಯವಾಗಲಿದೆಯೋ ರಾಜ್ಯವ್ಯಾಪಿ ಜಾರಿಯಾಗಲಿದೆಯೋ ಕಾದು ನೋಡಬೇಕಿದೆ.

ಸೋಮವಾರ ತುರ್ತು ಸಚಿವಸಂಪುಟ ಸಭೆ ನಡೆಯಲಿದ್ದು ರಾಜ್ಯದ ಸಮಗ್ರ ಮಾಹಿತಿಯನ್ನು ಮುಖ್ಯಮಂತ್ರಿಗಳು ಸಂಗ್ರಹಿಸಲಿದ್ದಾರೆ. ನಂತರ ಇನ್ನು 2 ವಾರಗಳ ಆ್ಯಕ್ಷನ್ ಪ್ಲ್ಯಾನ್ ಸಿದ್ದವಾಗಲಿದೆ. ಒಮ್ಮೆ 2ನೇ ಅಲೆಯ ಚೈನ್ ಬ್ರೇಕ್ ಮಾಡಲು ಕಠಿಣ ನಿರ್ಧಾರ ಅನಿವಾರ್ಯ ಎನ್ನುವ ತೀರ್ಮಾನಕ್ಕೆ ಮುಖ್ಯಮಂತ್ರಿಗಳು ಮತ್ತು ಬಹುತೇಕ ಸಚಿವರು ಬಂದಿದ್ದಾರೆ ಎನ್ನಲಾಗಿದೆ. ಜನರಿಗೆ ಒಮ್ಮೆ ಕಷ್ಟವಾದರೂ ಹೆಚ್ಚುತ್ತಿರುವ ಸೋಂಕಿನ ಪ್ರಮಾಣ ಮತ್ತು ಸಾವಿನ ಪ್ರಮಾಣಕ್ಕೆ ಬ್ರೇಕ್ ಹಾಕಲು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸಿಎಂ ತೀರ್ಮಾನಿಸಿದ್ದಾರೆ.

ಹಾಗಾಗಿ ಸೋಮವಾರ ಕಠಿಣ ನಿರ್ಧಾರ ಹೊರಬಿದ್ದರೂ ಆಶ್ಚರ್ಯವಿಲ್ಲ. ಜನರು ಇಂತಹ ಗಂಭೀರ ಪರಿಸ್ಥಿತಿ ತಡೆಯಲು ಸಿದ್ದರಾಗಲೇಬೇಕಾದ ಅನಿವಾರ್ಯತೆ ಇದೆ. ಬೆಂಗಳೂರಿನಲ್ಲಿ ಶರವೇಗದಲ್ಲಿ ಕೊರೋನಾ ಹೆಚ್ಚುತ್ತಿದ್ದರೆ ರಾಜ್ಯದ ಇತರ ಅನೇಕ ಜಿಲ್ಲೆಗಳಲ್ಲೂ ವೇಗಪಡೆದುಕೊಂಡಿದೆ. ಈಗ ಕಠಿಣ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಮನ್ನುವುದನ್ನು ಊಹಿಸುವುದೂ ಕಷ್ಟವಾಗಲಿದೆ.

ಬಹುತೇಕ ಸೋಮವಾರ ಸಂಜೆಯ ಹೊತ್ತಿಗೆ ಸರಕಾರ ವೀಕ್ ಎಂಡ್ ಕರ್ಫ್ಯೂವನ್ನೇ ವಾರಗಳ ಕಾಲ ವಿಸ್ತರಿಸುವ ನಿರ್ಧಾರಕ್ಕೆ ಬಂದರೆ ಆಶ್ಚರ್ಯವಿಲ್ಲ. ತುರ್ತು ಸೇವೆಗಳನ್ನು ಹೊರತುಪಡಿಸಿ ಇತರ ವ್ಯಾಪಾರ ವ್ಯವಹಾರಕ್ಕೆ ಈಗಾಗಲೆ ಕಡಿವಾಣ ಹಾಕಲಾಗಿದೆ. ಇನ್ನು ಮುಂದೆ ಅನಗತ್ಯ ವಾಹನ ಓಡಾಟಕ್ಕೂ ಬ್ರೇಕ್ ಬೀಳಲಿದೆ.

ತಜ್ಞರ ಪ್ರಕಾರ 15 ದಿನ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು, ಜನರೂ ಸ್ವಯಂ ಪ್ರೇರಿತರಾಗಿ ಸಹಕಾರ ನೀಡಿದಲ್ಲಿ ಕೊರೋನಾ ವೇಗಕ್ಕೆ ಬ್ರೇಕ್ ಬೀಳಲಿದೆ. ಜೀವ ಉಳಿಸಿಕೊಳ್ಳಲು ಜನರು ಇದಕ್ಕೆ ಸಿದ್ದರಾಗಲೇಬೇಕಿದೆ.

ಸೋಮವಾರದಿಂದ ಇನ್ನಷ್ಟು ಕಠಿಣ ನಿರ್ಧಾರ?

ಕೇಂದ್ರದಿಂದ ತೆರಿಗೆ ವಿನಾಯಿತಿ ಘೋಷಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button