40 ವರ್ಷ ಮೇಲ್ಪಟ್ಟವರಿಗೆ ಡೆಡ್ಲಿಯಾದೀತು ಚಳಿಗಾಲದ ಈ ಕ್ಷಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಚಳಿಗಾಲದ ಅವಧಿ ತನ್ನ ತೀವ್ರತೆ ಪಡೆದಿದೆ. ಈ ಅವಧಿಯಲ್ಲಿ ಮನುಷ್ಯನ ದೇಹಾರೋಗ್ಯದ ಮೇಲೆ ನಾನಾ ರೀತಿಯ ಪರಿಣಾಮಗಳು ಉಂಟಾಗುವುದು ಸಹಜ.  ಮೇಲ್ನೋಟಕ್ಕೆ ತಂಪು ಹವೆ ಆಹ್ಲಾದಕರ ಎನಿಸಿದರೂ ಕೆಲ ಬಾರಿ ಅನಾಹುತಕಾರಿಯೂ ಆಗಿರುತ್ತದೆ. ಶೀತ, ನೆಗಡಿ, ಜ್ವರದಂಥ ಬಾಧೆಗಳು ಈ ಅವಧಿಯಲ್ಲಿ ಹೆಚ್ಚು. ಆದರೆ 40 ವರ್ಷ ಮೀರಿದವರ ಪಾಲಿಗೆ ಇದು ಕೆಲ ಸಂದರ್ಭಗಳಲ್ಲಿ ಪ್ರಾಣಘಾತುಕವೂ ಆಗಬಹುದು ಎಂದು ತಜ್ಞರು ಹೇಳುತ್ತಾರೆ.

ಹಾಗಾದರೆ 40 ಮೀರಿದವರಿಗೆ ಚಳಿ ಅದು ಯಾವ ಆಪತ್ತುಗಳನ್ನು ತಂದೊಡ್ಡೀತು, ಏನೆಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ವೈದ್ಯ ಡಾ.ವಿಜಯ್ ಸಿಂಗ್ ರಜಪೂತ್ ಸಲಹೆ ಸೂಚನೆಗಳನ್ನು ನೀಡಿದ್ದಾರೆ.

ಈ ತೀವ್ರ ಚಳಿಯಲ್ಲಿ 40 ವರ್ಷ ಮೇಲ್ಪಟ್ಟವರು ರಾತ್ರಿ 10 ಗಂಟೆಗೆ ಮಲಗಿದ ತಕ್ಷಣ ಏಳಬಾರದು. ಏಕೆಂದರೆ ಶೀತದಿಂದ ದೇಹದ ರಕ್ತ ದಪ್ಪವಾಗುತ್ತದೆ. ನಂತರ ನಿಧಾನವಾಗಿ ಕೆಲಸ ಮಾಡುವುದರಿಂದ ಹೃದಯವನ್ನು ಸಂಪೂರ್ಣವಾಗಿ ತಲುಪಲು ಸಾಧ್ಯವಾಗದೆ ದೇಹದ ಮೇಲೆ ಪರಿಣಾಮವಾಗುತ್ತದೆ.

ಈ ಕಾರಣಕ್ಕಾಗಿ, 40 ವರ್ಷ ವಯಸ್ಸಿನ ಜನರು ಅಥವಾ 40 ವರ್ಷಕ್ಕಿಂತ ಮೇಲ್ಪಟ್ಟ ಹೆಚ್ಚಿನ ಜನರು ಚಳಿಗಾಲದ ತಿಂಗಳುಗಳಲ್ಲಿ ಹೃದಯ ಸ್ತಂಭನದಿಂದ ಆಘಾತಗಳಿಗೆ ಒಳಗಾಗುತ್ತಾರೆ. ಇದು ಹಲವರ ಪಾಲಿಗೆ ಡೆಡ್ಲಿ ಆಗಿಯೂ ಮಾರ್ಪಡುತ್ತದೆ. ಆದ್ದರಿಂದ ನಾವು ಅತ್ಯಂತ ಜಾಗರೂಕರಾಗಿರಬೇಕು ಎನ್ನುತ್ತಾರೆ ತಜ್ಞರು.

Home add -Advt

ಚಳಿಗಾಲದ ಅವಧಿಯಲ್ಲಿ 40 ವರ್ಷ ಮೀರಿದವರು ಮೂರುವರೆ ನಿಮಿಷಗಳ ಈ ಸಾಮಾನ್ಯ ಕ್ರಮಗಳನ್ನು ಅನುಸರಿಸಿದರೆ ಸುರಕ್ಷಿತವಾಗಿರಬಹುದು. ಈ ಮೂರೂವರೆ ನಿಮಿಷಗಳು ಅಪಘಾತದ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬಹುದು.

ಅನೇಕ ಜನ ಬೆಳಿಗ್ಗೆ ಅಥವಾ ರಾತ್ರಿ ಮೂತ್ರ ವಿಸರ್ಜನೆಗೆ ಎದ್ದಾಗ ಹಠಾತ್ತಾಗಿ ಹೃದಯ ಸ್ತಂಭನ ಉಂಟಾಗುತ್ತದೆ. ಇಂಥ ಅನೇಕ ಘಟನೆಗಳಲ್ಲಿ ಆರೋಗ್ಯವಂತರೂ ಜೀವ ಕಳೆದುಕೊಂಡಿದ್ದಿದೆ. ಅಂತಹವರ ಬಗ್ಗೆ “ನಾವು ನಿನ್ನೆಯಷ್ಟೇ ಮಾತನಾಡಿದ್ದೇವೆ” ಎಂದು ಹೇಳುತ್ತೇವೆ. ಇದ್ದಕ್ಕಿದ್ದಂತೆ ಏನಾಯಿತು? ಅವರು ಹೇಗೆ ಸತ್ತರು? ಎಂದೆಲ್ಲ ಪ್ರಶ್ನೆ ಹಾಕಿಕೊಳ್ಳುತ್ತೇವೆ.

ಇದಕ್ಕೆ ಮುಖ್ಯ ಕಾರಣ ರಾತ್ರಿ ಮೂತ್ರ ಮಾಡಲು ಹೋದಾಗಲೆಲ್ಲ ನಾವು ಹಠಾತ್ತನೆ ಅಥವಾ ಆತುರದಿಂದ ಎದ್ದೇಳುತ್ತೇವೆ, ಪರಿಣಾಮವಾಗಿ ರಕ್ತವು ಮೆದುಳಿಗೆ ತಲುಪುವುದಿಲ್ಲ.

ಈ ಮೂರೂವರೆ ನಿಮಿಷಗಳು ಬಹಳ ಮುಖ್ಯ.

ನಾವು ಮೂತ್ರ ವಿಸರ್ಜನೆಗೆ ಮಧ್ಯರಾತ್ರಿಯಲ್ಲಿ ಎಚ್ಚರಗೊಂಡಾಗ, ನಮ್ಮ ಇಸಿಜಿ ಮಾದರಿ ಬದಲಾಗಬಹುದು. ಇದಕ್ಕೆ ಕಾರಣ ಹಠಾತ್ತನೆ ನಿಂತಾಗ ಮೆದುಳಿಗೆ ರಕ್ತ ಬರುವುದಿಲ್ಲ ಮತ್ತು ನಮ್ಮ ಹೃದಯದ ಕಾರ್ಯ ನಿಲ್ಲುತ್ತದೆ.

ಮೂರೂವರೆ ನಿಮಿಷಗಳ ಈ ಪ್ರಯತ್ನ ಜೀವ ರಕ್ಷಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ.

1. ನಿದ್ದೆಯಿಂದ ಏಳುವಾಗ ಹಾಸಿಗೆಯ ಮೇಲೆ ಅರ್ಧ ನಿಮಿಷ ಮಲಗಿ.

2. ಮುಂದಿನ ಅರ್ಧ ನಿಮಿಷ ಹಾಸಿಗೆಯ ಮೇಲೆ ಕುಳಿತುಕೊಳ್ಳಿ.

3. ಮುಂದಿನ ಎರಡೂವರೆ ನಿಮಿಷ ಕಾಲನ್ನು ಹಾಸಿಗೆಯ ಕೆಳಗೆ ತೂಗಾಡುವಂತೆ ಬಿಡಿ.

ಮೂರೂವರೆ ನಿಮಿಷಗಳ ನಂತರ, ನಿಮ್ಮ ಮೆದುಳಿಗೆ ರಕ್ತ ಸಂಚಾರವಾಗಿರುತ್ತದೆ. ಮತ್ತು ಹೃದಯದ ಕ್ರಿಯೆಯೂ ಜಾರಿಯಿರುತ್ತದೆ. ಇದರಿಂದ ಹಠಾತ್ ಸಾವುಗಳು ಕಡಿಮೆಯಾಗುತ್ತವೆ ಎನ್ನುತ್ತಾರೆ ತಜ್ಞರು.   (ಮಾಹಿತಿ: ವಿವಿಧ ಮೂಲಗಳು)

*ಕಲುಷಿತ ನೀರು ಸೇವನೆ; ಮಹಿಳೆ ದುರ್ಮರಣ; ಹಲವರು ಅಸ್ವಸ್ಥ*

https://pragati.taskdun.com/poluted-waterwoman-died40-people-ill/

*ಬೆಳಗಾವಿ: ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ*

https://pragati.taskdun.com/belagavicongressprajadhwani-bus-yatrestartveerasoudha/

*ತೀರ್ಥಹಳ್ಳಿಯಲ್ಲಿ NIA ಅಧಿಕಾರಿಗಳ ದಿಢೀರ್ ದಾಳಿ*

https://pragati.taskdun.com/nia-raidshivamoggatirthahalli/

Related Articles

Back to top button