Latest

*ಕಲುಷಿತ ನೀರು ಸೇವನೆ; ಮಹಿಳೆ ದುರ್ಮರಣ; ಹಲವರು ಅಸ್ವಸ್ಥ*

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಕಲುಷಿತ ನೀರು ಸೇವಿಸಿ 40ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥರಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆಯ ರಾಣಿಪೇಟೆಯಲ್ಲಿ ನಡೆದಿದೆ.

 

Home add -Advt

ರಾಣಿಪೇಟೆ ನಿವಾಸಿ ಲಕ್ಷ್ಮೀ (55) ಮೃತ ಮಹಿಳೆ. ಹೊಸಪೇಟೆಯ ರಾಣಿಪೇಟೆ, ಚಲವಾದಿ ಕೇರಿ ಸೇರಿದಂತೆ ಹಲವೆಡೆ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ನೀರು ಕಲುಷಿತಗೊಂಡಿರುವ ಶಂಕೆ ವ್ಯಕ್ತವಾಗಿದೆ.

 

ಕುಡಿಯುವ ನೀರು  ಕಲುಷಿತವಾಗಿರುವುದು ಗೊತ್ತಾಗದೇ  ನೀರು ಸೇವಿಸಿದ್ದು, ಈಗ 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಓರ್ವ ಮಹಿಳೆ ಲಕ್ಷ್ಮೀ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

https://pragati.taskdun.com/body-builderdeathbangalore/

Related Articles

Back to top button