
ಪ್ರಗತಿವಾಹಿನಿ ಸುದ್ದಿ: ಪತಿಯ ವಿಚಿತ್ರ ವರ್ತನೆಗೆ ಬೇಸತ್ತು ಪೊಲೀಸ್ ಠಾಣೆಯಲ್ಲಿ ಕೆಲ ದಿನಗಳ ಹಿಂದೆ ದೂರು ನೀಡಿದ್ದ ಪತ್ನಿ ಪ್ರಕರಣ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಮಹಿಳೆಯೊಬ್ಬರು ತನ್ನ ಪತಿ ಬೆತ್ತಲಾಗಿ ಓಡಾಡುತ್ತಾನೆ. ಅಶ್ಲೀಲ ವಿಡಿಯೋಗಳನ್ನು ತೋರೊಸಿ ಹಿಂಸಿಸುತ್ತಾನೆ ಎಂದು ಆರೋಪಿಸಿದ್ದರು. ಮಹಿಳೆಯ ವಿರುದ್ಧ ಆಕೆಯ ಮೂರನೇ ಗಂಡ ಗಂಭೀರ ಆರೋಪಗಳನ್ನು ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮೇಘಶ್ರೀ ಎಂಬ ಮಹಿಳೆ ಕೆಲ ದಿನಗಳ ಹಿಂದೆ ತನ್ನ ಪತಿ ಮಂಜುನಾಥ್ ವಿಚಿತ್ರವಾಗಿ ವರ್ತಿಸಿ ತನಗೆ ಹಿಂಸಿಸುತ್ತಿದ್ದಾನೆ. ಹಣಕ್ಕಾಗಿ ಬೇಡಿಕೆ ಇಡುತ್ತಿದ್ದು, ತನ್ನ ಕುಟುಂಬದವರಿಗೂ ಜೀವಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಪತಿ ಮಂಜುನಾಥ್ ಮೇಘಶ್ರೀ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾನೆ.
ಮೇಘಶ್ರೀಗೆ ಅದಾಗಲೇ ಎರಡು ಮದುವೆಯಾಗಿದೆ. ನಾನು ಮೂರನೇ ಪತಿ. ಈಗ ಆಕೆ ನಾಲ್ಕನೇ ಮದುವೆಯಾಗಲು ಹೊರಟಿದ್ದಾಳೆ. ಹಣಕ್ಕಾಗಿ ಮದುವೆಯಾಗಿ ವಿಚ್ಛೇಧನ ನೀಡಿ ಮತ್ತೆ ಬೇರೆ ಮದುವೆಯಾಗುವುದನ್ನೇ ಕೆಲಸವನ್ನಾಗಿಸಿಕೊಂಡಿದ್ದಾಳೆ ಎಂದು ಆರೋಪಿಸಿದ್ದಾನೆ.
ಮೇಘಶ್ರೀಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. ಪತಿಗೆ ವಿಚ್ಛೇದನ ನೀಡಿ ಎರಡನೇ ಮದುವೆಯಾಗಿದ್ದಾಳು. ಟೂರು, ಟ್ರಿಪ್ ಎಂದು ಓಡಾದ್ದಾಳೆ. ಬಳಿಕ ಎರಡನೇ ಪತಿಗೂ ಕೈಕೊಟ್ಟು ತನ್ನನ್ನು ಮದುವೆಯಾಗಿದ್ದಾಳೆ. ಆದರೆ ನಮ್ಮದು ಅಧಿಕೃತ ಮದುವೆಯಲ್ಲ. ನಾವು ಲಿವ್ ಇನ್ ಸಂಬಂಧದಲ್ಲಿದ್ದೆವು. ಆದರೂ ತನ್ನನ್ನು ಗಂಡ ಎಂದು ಹೇಳಿಕೊಂಡು ಓಡಾಡುತ್ತಿದ್ದಳು. ಆಕೆ ಇರುವ ಮನೆಗೆ ತಾನೇ 12 ಲಕ್ಷ ಲೀಸ್ ಹಣ ಕೊಟ್ಟಿದ್ದೇನೆ. ಈಗ ಬೇರೊಬ್ಬನನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದಾಳೆ. ಹಾಗಾಗಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾಳೆ. ಹಣ, ಶೋಕಿ ಜೀವನಕ್ಕಾಗಿ ಈ ರೀತಿ ಮಾಡುತ್ತಿದ್ದಾಳೆ ಎಂದು ದೂರಿದ್ದು, ಈ ಬಗ್ಗೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ನೀಡುವುದಾಗಿ ತಿಳಿಸಿದ್ದಾರೆ.
ಮಂಜುನಾಥ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮೇಘಶ್ರೀ, ನನಗೆ ಎರಡು ಮದುವೆಯಾಗಿ ವಿಚ್ಛೇದನ ಪಡೆದಿದ್ದ ಬಗ್ಗೆ ಆತನಗೆ ಗೊತ್ತಿದ್ದೇ ಮದುವೆಯಾಗಿದ್ದಾನೆ. ಅಲ್ಲದೇ ನಮ್ಮದು ಅಧಿಕೃತವಾಗಿ ಆಗಿರುವ ಮದುವೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ, ದೇವಸ್ಥಾನದಲ್ಲಿ ಮದುವೆಯಾಗಿದ್ದೇವೆ. ಮದುವೆ ವೇಳೆಯೂ ಹಣ, ಚಿನ್ನವನ್ನು ಕೊಡಲಾಗಿದೆ. ಮದುವೆ ಬಳಿಕವೂ ನನ್ನಿಂದ ಸಾಕಷ್ಟು ಹಣವನ್ನು ಪಡೆದುಕೊಂಡಿದ್ದ. ಅಲ್ಲದೇ ಎಲ್ಲರ ಮುಂದೆ ಅಸಭ್ಯವಾಗಿ ವರ್ತಿಸುವುದು. ವಿಚಿತ್ರವಾಗಿ ನಡೆದುಕೊಳ್ಳುವುದು ಮಾಡುತ್ತಿದ್ದ. ಆತನ ಬೆತ್ತಲೆ ವಿಡಿಯೋಗಳು, ಹುಚ್ಚಾಟಗಳು ಈಗಾಗಲೇ ಹೊರಬಂದಿವೆ. ಆತನ ಹಿಂಸೆ, ಬೆದರಿಕೆಗೆ ಬೇಸತ್ತು ದೂರು ನೀಡಿದ್ದೇನೆ. ಆತನ ವಿರುದ್ಧ ದೂರು ನೀಡಿದ್ದಕ್ಕೆ ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾನೆ. ಕಾನೂನು ಪ್ರಕಾರ ಹೋರಾಡುವುದಾಗಿ ತಿಳಿಸಿದ್ದಾರೆ.


