Kannada NewsKarnataka NewsLatest
*3 ಕೋಟಿ ರೂಪಾಯಿ ವಂಚಿಸಿದ ಟೈಲರ್ ಮಹಿಳೆಗೆ ನಡುರಸ್ತೆಯಲ್ಲಿ ಹಿಗ್ಗಾ ಮುಗ್ಗಾ ಥಳಿಸಿದ ಸಾರ್ವಜನಿಕರು*

ಪ್ರಗತಿವಾಹಿನಿ ಸುದ್ದಿ: ಟೈಲರ್ ಅಂಗಡಿ ನಡೆಸುತ್ತಿದ್ದ ಮಹಿಳೆಯೊಬ್ಬರು ಜನರಿಗೆ ಬರೋಬ್ಬರಿ ಮೂರು ಕೋಟಿ ರೂಪಾಯಿ ಹಣವನ್ನು ವಂಚಿಸಿದ್ದು, ಆರೋಪಿಯನ್ನು ಹಿಡಿದ ಮಹಿಳಾಮಣಿಗಳು ನಡು ರಸ್ತೆಯಲ್ಲಿ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದಲ್ಲಿ ಜ್ಯೋತಿ ಡ್ರೆಸ್ ಟ್ರೈಲರ್ ಅಂಗಡಿ ಇಟ್ಟುಕೊಂಡಿದ್ದ ಹೇಮಾವತಿ ಎಂಬ ಮಹಿಳೆ ಜನರಿಗೆ ಬಣ್ಣದ ಮಾತುಗಳನ್ನಾಡಿ ಲಕ್ಷ ಲಕ್ಷ ಹಣ ಪಡೆದುಕೊಂಡಿದ್ದಾಳೆ. ಪತ್ನಿಯ ಮೋಸದಾಟಕ್ಕೆ ಪತಿ ವಿರೂಪಾಕ್ಷ ಕೂಡ ಬೆಂಬಲ ನೀಡಿದ್ದಾನೆ. ಇಬ್ಬರು ಸೇರಿ ಜನರಿಂದ ಬರೋಬ್ಬರಿ 3 ಕೋಟಿ ಹಣ ವಂಚಿಸಿದ್ದಾರೆ.
ಹಣ ಕಳೆದುಕೊಂಡ ಕುಟುಖ್ಬದವರು, ಮಹಿಳೆಯರು ಇಂದು ಟೈಲರ್ ಶಾಪ್ ಬಳಿ ಬಂದು ಮಹಿಳೆ ಹೇಮಾವತಿಯನ್ನು ಹಿಡಿದಿದ್ದಾರೆ. ಆಕೆಯನ್ನು ಅಂಗಡಿಯಿಂದ ಹೊರಗೆಳೆದು ತಂದು ಜಡೆ ಹಿಡಿದು ಎಳೆದಾಡಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಸಾರ್ವಜನಿಕವಾಗಿ, ರಸ್ತೆಯಲ್ಲಿ ಎಳೆದು ತಂದು ಮಹಿಳೆಯನ್ನು ಹೊಡೆದಿದ್ದು, ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ್ದಾರೆ.



