Karnataka NewsLatest

*ಅಚ್ಚರಿ ಘಟನೆ: ಬೆಕ್ಕು ಕಚ್ಚಿ ಮಹಿಳೆ ಸಾವು; ಕಾರಣವೇನು ಗೊತ್ತೇ?*

ಪ್ರಗತಿವಾಹಿನಿ ಸುದ್ದಿ: ಬೆಕ್ಕು, ನಾಯಿಗಳನ್ನು ಸಾಕುವುದು ಸಾಮಾನ್ಯ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ದುಬಾರಿ ಬೆಕ್ಕು, ನಾಯಿಗಳನ್ನು ಸಾಕುವ ಕ್ರೇಜ್ ಕೂಡ ಹೆಚ್ಚಾಗಿದೆ. ಇಲ್ಲೊಂದು ಅಚ್ಚರಿ ಘಟನೆಯಲ್ಲಿ ಸಾಮಾನ್ಯ ಸಾಕು ಬೆಕ್ಕೊಂದು ಕಚ್ಚಿ ಮಹಿಳೆಸಾವನ್ನಪ್ಪಿರುವ ಘಟನೆ ನಡೆದಿದೆ.

ಅಚ್ಚರಿ ಎನಿಸಿದರೂ ನಿಜ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟದಲ್ಲಿ ಈ ದುರಂತ ಸಂಭವಿಸಿದೆ. ಗಂಗೀಬಾಯಿ (50) ಬೆಕ್ಕು ಕಚ್ಚಿದ ಪರಿಣಾಮ ಸಾವನ್ನಪ್ಪಿರುವ ಮಹಿಳೆ.

ಇದೇ ಸಾಕು ಬೆಕ್ಕು ಮೊದಲು ತರಲಘಟ್ಟದ ಕ್ಯಾಂಪ್ ನಲ್ಲಿದ್ದ ಯುವಕನೊಬ್ಬನ ಮೇಲೆ ದಾಳಿ ಮಾಡಿತ್ತು. ಎರಡು ತಿಂಗಳ ಹಿಂದೆ ಮಹಿಳೆ ಗಂಗೀಬಾಯಿ ಎಂಬುವವರಿಗೆ ಬೆಕ್ಕು ಕಚ್ಚಿದೆ. ಮಹಿಳೆಯ ಕಾಲಿಗೆ ಬೆಕ್ಕು ಕಚ್ಚಿದ ಪರಿಣಾಮ ಗಾಯಗೊಂಡಿದ್ದರು. ಅಲ್ಲದೇ ಒಂದು ಇಂಜಕ್ಷನ್ ಪಡೆದು ಗುಣಮುಖರಾಗಿದ್ದರು. ಆದರೆ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿ ಇದೀಗ ಮಹಿಳೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬೆಕ್ಕು ಕಚ್ಚಿ ಗಾಯಗೊಂಡಿದ್ದ ಮಹಿಳೆ 5 ಇಂಜಕ್ಷನ್ ತೆಗೆದುಕೊಳ್ಳಬೇಕಿತ್ತು. ಆದರೆ ಒಂದು ಇಂಜಕ್ಷನ್ ಬಳಿಕ ಗುಣಮುಖನಾಗಿದ್ದೇನೆ ಎಂದು ನಿರ್ಲಕ್ಷ ಮಾಡಿದ್ದರು. ಮೂರ್ನಾಲ್ಕು ದಿನಗಳಿಂದ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗಿತ್ತು. ದೇಹದಲ್ಲಿ ನಂಜು ಏರತೊಡಗಿತ್ತು. ಇದರಿಂದ ಮಹಿಳೆ ಗಂಭೀರ ಸ್ಥಿತಿ ತಲುಪಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಮಹಿಳೆ ಕೊನೆಯುಸಿರೆಳೆದಿದ್ದಾರೆ. ಮಹಿಳೆ ರೇಬಿಸ್ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button