*ಫೇಸ್ ಬುಕ್ ಪ್ರಿಯಕರನೊಂದಿಗೆ ಮಹಿಳೆಯ ಲವ್ವಿಡವ್ವಿ: ಪತಿಯೊಂದಿಗೆ ತೆರಳುತ್ತಿದ್ದಂತೆ ಬರ್ಬರವಾಗಿ ಹತ್ಯೆಗೈದು ಕೃಷಿಹೊಂಡಕ್ಕೆ ಎಸೆದ ಪ್ರಿಯತಮ*
ಪ್ರಗತಿವಾಹಿನಿ ಸುದ್ದಿ: ಮದುವೆಯಾಗಿದ್ದರೂ ಮಹಿಳೆಯೊಬ್ಬಳು ಫೇಸ್ ಬುಕ್ ನಲ್ಲಿ ಪರಿಚಯನಾದ ಗೆಳೆಯನೊಂದಿಗೆ ಪ್ರೀತಿಯಲ್ಲಿ ಬಿದ್ದು, ಆತನಿಂದಲೇ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕಿಚ್ಚಿಬ್ಬಿ ಗ್ರಾಮದಲ್ಲಿ ನಡೆದಿದೆ.
ತೃಪ್ತಿ (25) ಕೊಲೆಯಾಗಿರುವ ಮಹಿಳೆ. ಆಕೆಯ ಪ್ರಿಯಕರ ಚಿರಂಜೀವಿ ಕೊಲೆ ಆರೋಪಿ. ಮಹಿಳೆ ತೃಪ್ತಿಯನ್ನು ಭೀಕರವಾಗಿ ಕೊಲೆ ಮಾಡಿ, ಮೃತದೇಹವನ್ನು ಕೃಷಿ ಹೊಂಡಕ್ಕೆ ಹಾಕಿ ಪರಾರಿಯಾಗಿದ್ದಾನೆ.
ತೃಪ್ತಿಗೆ ರಾಜು ಎಂಬಾತನ ಜೊತೆ ಅದಾಗಲೇ ವಿವಾಹವಾಗಿತ್ತು. ಆದಾಗ್ಯೂ ಫೇಸ್ ಬುಕ್ ನಲ್ಲಿ ಪರಿಚಯನಾದ ಚಿರಂಜೀವಿ ಎಂಬಾತನ ಜೊತೆ ಸಲುಗೆ ಬೆಳಸಿದ್ದ ತೃಪ್ತಿ, ಆತನ ಜೊತೆ ಪ್ರೀತಿ-ಪ್ರೇಮ ಎಂದು ತಿಂಗಳ ಹಿಂದೆ ಪತಿಯನ್ನು ಬಿಟ್ಟು ಓಡಿಹೋಗಿದ್ದಳು. ಚಿರಂಜೀವಿ ಹಾಗೂ ತೃಪ್ತಿ ಇಬ್ಬರೂ ನಾಪತ್ತೆಯಾಗಿದ್ದರು. ಬಾಳೆಹೊನ್ನೂರು ಠಾಣೆಯಲ್ಲಿ ಪತಿ ದೂರು ದಾಖಲಿಸಿದ್ದ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಹುಡುಕಿ ಪೊಲೀಸ್ ಠಾಣೆಗೆ ಕರೆತಂದು ಬುದ್ಧಿ ಹೇಳಿದ್ದರು. ಪೊಲೀಸರು ಹಾಗೂ ಪೋಷಕರು ಪೊಲೀಸ್ ಠಾಣೆಯಲ್ಲಿಯೇ ಸಂಧಾನ ಮಾಡಿದ್ದರು. ಬಳಿಕ ತೃಪ್ತಿ ತನ್ನ ಪತಿ ರಾಜುವಿನ ಜೊತೆ ತೆರಳಿದ್ದಳು. ಇದರಿಂದ ಕುಪಿತಗೊಂಡ ಚಿರಂಜೀವಿ ಮನೆಗೆ ನುಗ್ಗಿ ತೃಪ್ತಿಯನ್ನು ಕೊಲೆಗೈದು, ಶವವನ್ನು ಕೃಷಿ ಹೊಂಡಕ್ಕೆ ಹಾಕಿ ಎಸ್ಕೇಪ್ ಆಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ