Karnataka News

*ಅಪ್ಪ ಬೈಕ್ ಕೊಡಿಸಿಲ್ಲ ಎಂದು ಮನನೊಂದ ಯುವಕ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಅಪ್ಪ ಬೈಕ್ ಕೊಡಿಸಿಲ್ಲ ಎಂದು ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ.

20 ವರ್ಷದ ವಿಕಾಸ್.ಆರ್ ಆತ್ಮಹತ್ಯೆಗೆ ಶರಣಾಗಿರುವ ಯುವಕ. ವಿಕಾಸ್ ಹಲವು ದಿನಗಳಿಂದ ತನ್ನ ತಂದೆಗೆ ಬೈಕ್ ಕೊಡಿಸುವಂತೆ ಕೇಳುತ್ತಿದ್ದನಂತೆ. ಆದರೆ ಹಣಕಾಸಿನ ಅಡಚಣಿಯಿಂದ ಮಗನಿಗೆ ಬೈಕ್ ಕೊಡಿಸಿರಲಿಲ್ಲವಂತೆ ಇದರಿಂದ ನೊಂದ ವಿಕಾಸ್ ಅಪ್ಪನ ಮೇಲೆ ಕೋಪಗೊಂಡು ಮನೆಯವರ ಜೊತೆಯೂ ಮಾತು ಬಿಟ್ಟಿದ್ದನಂತೆ.

Home add -Advt

ವಾರದ ಹಿಂದೆ ಮನೆಯನ್ನೂ ಬಿಟ್ಟು ಹೋಗಿದ್ದ ಯುವಕ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದ. ಅಪ್ಪ ಬೈಕ್ ಕೊಡಿಸಿಲ್ಲ ಎಂಬುದನ್ನು ಮಾನಸಿಕವಾಗಿ ಹಚ್ಚಿಕೊಂಡು ತೀವ್ರವಾಗಿ ನೊಂದಿದ್ದ ಯುವಕ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಯುವಕನನ್ನು ನ್ಯಾಮತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದುದರಿಂದ ಮಣಿಪಾಲ್ ಹಾಗೂ ಶಿವಮೊಗ್ಗ ಆಸ್ಪತ್ರೆಗಳಿಗೂ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಇಂದು ಕೊನೆಯುಸಿರೆಳೆದಿದ್ದಾನೆ.

Related Articles

Back to top button