
ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಬ್ಬಳ ನಗ್ನ ಶವ ಪ್ಲಾಸ್ಟಿಕ್ ಚೀಲದಲ್ಲಿ ಪತ್ತೆಯಾಗಿರುವ ಘಟನೆ ಹೈದರಾಬಾದ್ನ ಕಿಸ್ಮತ್ಪುರದ ಸೇತುವೆಯ ಕೆಳಗೆ ನಡೆದಿದೆ.
ಹೈದರಾಬಾದ್ ನ ರಾಜೇಂದ್ರನಗರ ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಮಹಿಳೆಯ ಶವ ಪತ್ತೆಯಾಗುತ್ತಿದ್ದಂತೆ ಜನ ಬೆಚ್ಚಿಬಿದಿದ್ದಾರೆ.
ದೇಹದ ಮೇಲೆ ಬಟ್ಟೆ ಇಲ್ಲದ ಕಾರಣ. ಮಹಿಳೆಯನ್ನು ಕೊಲ್ಲುವ ಮೊದಲು ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಶವ ಪತ್ತೆಯಾಗುವ ಸುಮಾರು ಮೂರು ದಿನಗಳ ಮೊದಲು ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ರಾಜೇಂದ್ರನಗರ ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿ, ಪ್ರದೇಶವನ್ನು ಸುತ್ತುವರೆದು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ವಿಶೇಷ ಸುಳಿವುಗಳ ತಂಡವು ಸಂಭಾವ್ಯ ಶಂಕಿತರನ್ನು ಗುರುತಿಸಲು ಹತ್ತಿರದ ಸ್ಥಳಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.