Kannada NewsKarnataka NewsLatest

ಮಹಿಳೆಯರು, ಮಕ್ಕಳ ಆರೋಗ್ಯದ ಕಾರ್ಯಕ್ರಮಗಳ ಹೆಚ್ಚು ಪ್ರಮಾಣದಲ್ಲಿ ನಡೆಯುವಂತಾಗಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಿಳೆಯರಲ್ಲಿ ಹಾಗೂ ಮಕ್ಕಳಲ್ಲಿ ಆರೋಗ್ಯದ ಅರಿವು ಮೂಡಿಸುವ ಇಂತಹ ಆರೋಗ್ಯ ಸಲಹಾ ಕಾರ್ಯಕ್ರಮಗಳು ಹೆಚ್ಚು ಪ್ರಮಾಣದಲ್ಲಿ ನಡೆಯಬೇಕಿದೆ ಎಂದು ವಿದ್ವಾನ್ ಎಂ.ಜಿ.ರಾವ್ ಹೇಳಿದರು.

ಮಠಗಲ್ಲಿಯಲ್ಲಿರುವ ವಿಶಾರದಾ ನೃತ್ಯ ಶಾಲಾ ಸಭಾಂಗಣದಲ್ಲಿ ನಾದಸುಧಾ ಸುಗಮ ಸಂಗೀತ ಶಾಲೆ ಹಮ್ಮಿಕೊಂಡಿದ್ದ, ಡಾ. ಸಂಪ್ರೀತಾ ಅವರು ನಡೆಸಿಕೊಟ್ಟ ‘ಆರೋಗ್ಯವೇ ಭಾಗ್ಯ’ ಕಾರ್ಯಕ್ರಮವನ್ನು ವಿದುಷಿ ಪ್ರೇಮಾ ಉಪಾಧ್ಯ ಅವರೊಂದಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ರೋಗ, ಕ್ಯಾನ್ಸರ್ ಹಾಗೂ ಸಾಮಾನ್ಯ ಮಾನಸಿಕ ಒತ್ತಡಗಳ ಕಾಯಿಲೆಗಳು ಬರುವ ಮೂಲ ಕಾರಣಗಳು, ತಡೆಗಟ್ಟುವ ಉಪಾಯಗಳು ಹಾಗೂ ಅದಕ್ಕೆ ಗುಣಮುಖವಾಗುವ ಬಗೆಗಳ ಬಗ್ಗೆ ಮಾಹಿತಿ ನೀಡಿದ ಡಾ ಸಂಪ್ರೀತಾ, ಪರಿಹಾರಗಳಾದ ಒತ್ತಡ ನಿವಾರಣೆ, ಸರಳ ವ್ಯಾಯಾಮ, ಸಮತೋಲನ ಹಾಗೂ ಪೌಷ್ಠಿಕ ಆಹಾರ ಸೇವನೆ, ಸಂಗೀತದಂತಹ ಹವ್ಯಾಸ ಹಾಗೂ ಸ್ನೇಹಮಯ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

ಇದೇ ಸಮಯದಲ್ಲಿ ನಾದಸುಧಾ ವಿದ್ಯಾರ್ಥಿಗಳು ವಿವಿಧ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ನಾದಸುಧಾ ಶಾಲೆಯ ಸಂಸ್ಥಾಪಕರಾದ ಸತ್ಯನಾರಾಯಣ ಅವರು ಸ್ವಾಗತಿಸಿದರು. ಪೂರ್ಣಿಮಾ ಪತ್ತಾರ ಅವರು ವಂದಿಸಿದರು. ಇದೇ ಹಾಗೂ ವೇಳೆ ಶಾಂತಿನಾಥ ಉಪಾಧ್ಯ ಹಾಗೂ ಮತ್ತಿತರು ಗಣ್ಯರು ಉಪಸ್ಥಿತರಿದ್ದರು.

‘ಪಿಎಫ್ ಐ ಸೇರಿ’ ಪೋಸ್ಟರ್ : ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button