Latest

ರಾಯಣ್ಣ ಸಾಂಸ್ಕೃತಿಕ ಉತ್ಸವದಲ್ಲಿ ಮನ ತಣಿಸಿದ ಜನಪದ ಹಾಡುಗಾರಿಕೆ

 

   ಪ್ರಗತಿವಾಹಿನಿ ಸುದ್ದಿ, ಧಾರವಾಡ

ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕನಕ ಕಲಾ ಸಾಂಸ್ಕೃತಿಕ ಕೇಂದ್ರ (ರಿ) ಸುಕ್ಷೇತ್ರ ಶ್ರೀ ರೇವಣಸಿದ್ದೇಶ್ವರ ಮಹಾಮಠ ಮನಸೂರ ಧಾರವಾಡ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ ಜರುಗಿದ ರಾಷ್ಟ್ರವೀರ ಸಂಗೊಳ್ಳಿ ರಾಯಣ್ಣ ಸಾಂಸ್ಕೃತಿಕ ಉತ್ಸವದಲ್ಲಿ ವೈವಿಧ್ಯಮಯ ಗೀತೆಗಳ ಹಾಡುಗಾರಿಕೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಬಂಡ್ಲ ಹಳ್ಳಿ ವಿಜಯಕುಮಾರ ಹಾಗೂ ಡಾ. ವ್ಹಿ. ಸಿ. ಐರಸಂಗ ಅವರ ರಚನೆಗಳನ್ನು ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಯುವ ಗಾಯಕಿ ಅನಿತಾ ಆರ್ ಹಾಡಿದರು. ಮನೆಯೊಳಗೆ ಮನೆಯೊಡೆಯ, ಬಿದಿರು ನಾನಾರಿಗಲ್ಲದವಳು, ಮಲೇಯ ಮಾದೇವ, ಮಾಮರದ ತಂಪಿಗೆ, ಮಾತನಾಡಣಯ್ಯ ಮಾತನಾಡು, ಗುರುವೇ ನಿನ್ನಾಟ ಬಲ್ಲವರ‍್ಯಾರರು, ಯಂತಾ ಮೋಜಿನ ಕುದುರೆ ಹೀಗೆ ಮುಂತಾದ ಜಾನಪದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಕೇಳುಗರನ್ನು ಅನಿತಾ ಆರ್ ಮನರಂಜಿಸಿದರು.

Home add -Advt

ಕ್ಯಾಶಿಯೋದಲ್ಲಿ ಮಂಜುನಾಥ, ತಬಲಾದಲ್ಲಿ ಯುವ ತಬಲಾ ಕಲಾವಿದ ಯಮನಪ್ಪ ಜಾಲಗಾರ ಕೇಳುಗರನ್ನು ರಂಜಿಸಿದರು.  ಅಪೂರ್ವ ಭಜಂತ್ರಿ, ಅಕ್ಷತಾ ಗಚ್ಚಿನಮನಿ, ಐಶ್ವರ್ಯ ಕಲಾಲ ಹಿನ್ನೆಲೆ ಗಾಯನ ಹಾಡಿದರು.

Related Articles

Back to top button