Latest

ನಡುಬೀದಿಯಲ್ಲಿ ನಾರಿಮಣಿಯರ ಏಟಿಗೆ ಯುವಕ ಹಣ್ಣುಗಾಯಿ ನೀರುಗಾಯಿ; ವಿಡಿಯೊ ವೈರಲ್

ಪ್ರಗತಿವಾಹಿನಿ ಸುದ್ದಿ, ರಾಯಪುರ: ಯುವತಿಯರ ಗುಂಪೊಂದು ನಡುಬೀದಿಯಲ್ಲೇ ಯುವಕನ ಮೇಲೆ ಹಲ್ಲೆ ಮಾಡಿ ಆತನ ಅಂಗಿ ಹರಿದು ಅರೆಬೆತ್ತಲೆಯಾಗಿ ಓಡಿಸಿದ ಘಟನೆಯ ವಿಡಿಯೊವೊಂದು ವೈರಲ್ ಆಗಿದೆ.

ಛತ್ತೀಸ್ ಗಡದ ರಾಯಪುರದ ವಿವೇಕಾನಂದ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಬಿಳಿಯ ಶರ್ಟ್, ಕಪ್ಪು ಪ್ಯಾಂಟ್ ಯುನಿಫಾರ್ಮ್ ಧರಿಸಿರುವ ಯುವತಿಯರು ಯುವಕನೊಬ್ಬನನ್ನು ಬೆಲ್ಟ್ ನಿಂದ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೆ ಪದೇಪದೆ ಕಪಾಳಮೋಕ್ಷ ಮಾಡಿದ್ದಾರೆ. ಅಂಗಿ ಹರಿದು ಯುವಕನನ್ನು ಅರೆಬೆತ್ತಲೆಯಾಗಿ ಓಡಿಸಿದ್ದಾರೆ.

ಈ ದೃಶ್ಯವನ್ನು ಹಲವರು ಪಕ್ಕದಲ್ಲಿ ನಿಂತು ವೀಕ್ಷಿಸುತ್ತಿದ್ದು ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಹಣಕಾಸಿನ ವಿಚಾರದಲ್ಲಿ ನಾರಿಯರ ಮುನಿಸು ಸ್ಫೋಟಗೊಂಡಿದೆ ಎನ್ನಲಾಗಿದ್ದು ಯುವತಿಯರು ಹಾಗೂ ಯುವಕ ಇಬ್ಬರೂ ಪರಸ್ಪರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ನೀವು ಮಾಡಹೊರಟಿರುವುದು ದೇಶದ ಸಂವಿಧಾನ ವಿರೋಧಿ ಕೆಲಸ : ಪೊಲೀಸ್ ಶಿಸ್ತು ನಡವಳಿಕೆ ತಿದ್ದುಪಡಿಗೆ ಕಾನ್ಸ್ಟೆಬಲ್ ಆಕ್ಷೇಪ; ಭಾರೀ ವೈರಲ್ ಆಯ್ತು ಪತ್ರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button