Kannada NewsKarnataka NewsLatest

ಮಹಿಳೆ ನಾಪತ್ತೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಜಿಲ್ಲೆಯ ಹಿಂಡಲಗಾ ತಾಲೂಕಿನ ಕಲ್ಮೇಶ್ವರ ನಗರದ ನಿವಾಸಿಯಾದ ವೀಣಾ ವಿಶಾಲ ಲೋಹಾರ (33 ವರ್ಷ) ಎಂಬ ಹೆಸರಿನ ಮಹಿಳೆ ನಾಪತ್ತೆಯಾಗಿದ್ದಾರೆ.

ಶನಿವಾರ (ಸೆ.11) ಸಾಯಂಕಾಲ ೭.೩೦ ಗಂಟೆಯ ಸುಮಾರಿಗೆ ಹಿಂಡಲಗಾ ಗ್ರಾಮದ ತನ್ನ ಮನೆಯಿಂದ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವವರು ಮನೆಗೆ ಬಾರದೆ ಕಾಣೆಯಾಗಿದ್ದಾರೆಂದು ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀಣಾ  ೪ ಅಡಿ ೮ ಇಂಚು ಎತ್ತರವಿದ್ದು, ಉದ್ದ ಮುಖ, ಗೋದಿ ಮೈಬಣ್ಣ ಹೊಂದಿರುತ್ತಾರೆ. ಮನೆಯಿಂದ ಹೋಗುವಾಗ ಮಹಿಳೆಯು ಬೂದಿ ಬಣ್ಣದ ಚೂಡಿದಾರ್, ಕೆಂಪು ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ, ಹಿಂದಿ, ಮರಾಠಿ ಭಾಷೆಯನ್ನು ಮಾತನಾಡುತ್ತಾರೆ.
ಈ ಪ್ರಕಾರ ಚಹರೆಯುಳ್ಳ ಮಹಿಳೆ ಬಗ್ಗೆ ಮಾಹಿತಿ ಸಿಕ್ಕಲ್ಲಿ, ಪೋಲಿಸ್ ಆಯುಕ್ತರು ಬೆಳಗಾವಿ ಅಥವಾ ಪೋಲಿಸ್ ಇನ್ಸ್ಪೆಕ್ಟರ್ ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆಗೆ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಪೋಲಿಸ್ ಕಂಟ್ರೋಲ್ ರೂಂ. ೦೮೩೧-೨೪೦೫೨೩೩, ಪಿ.ಐ ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆ-೯೪೮೦೮೦೪೦೩೧, ಬೆಳಗಾವಿ ಗ್ರಾಮೀಣ ಠಾಣೆ- ೦೮೩೧-೨೪೦೫೨೫೨ ಗೆ ಸಂಪರ್ಕಿಸಬಹುದು ಎಂದು ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆಯ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಕೇಸ್; ತನಿಖಾ ವರದಿಗೆ ಆಕ್ಷೇಪಣೆ

Home add -Advt

Related Articles

Back to top button