ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಬೆಳಗಾವಿಯ ರಾಣಿ ಚೆನ್ನಮ್ಮ ಹಾಗು ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಎಂಪವರ್ ಘಟಕದಿಂದ ಇದೆ 12 ರಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಭವನದಲ್ಲಿ “ಎಲ್ಲರೂ ಸಮಾನತೆಗಾಗಿ” ಎಂಬ ಹೆಸರಿನಡಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ.
ರಾಯಚೂರಿನ ರಾಜ್ಯ ಪ್ರಶಸ್ತಿ ವಿಜೇತೆ ಹಾಗೂ ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಕಾರ್ಯಕ್ರಮ ಉದ್ಘಾಟನಾ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಐಸಿಎಫ್(ಇಂಟರ್ ನ್ಯಾಷನಲ್ ಕೊಚ್ ಫೆಡರೇಷನ್) ನ ಅರ್ಚನಾ ಕೃಷ್ಣಮೂರ್ತಿ ಭಾಗವಹಿಸಿಲಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ ರಾಮಚಂದ್ರ ಗೌಡ ಅವರು ಅಧ್ಯಕ್ಷತೆ ಹಾಗೂ ಅತಿಥಿಗಳಾಗಿ ಕುಲಸಚಿವರಾದ ಪ್ರೊ ಬಸವರಾಜ್ ಪದ್ಮಸಾಲಿ, ಪರಿಕ್ಷಾ ವಿಭಾಗದ ಕುಲಸಚಿವ ಪ್ರೋ ಎಸ್. ಎಮ್. ಹುರಕಡ್ಲಿ, ಮತ್ತು ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೋ ಡಿ.ಎನ್. ಪಾಟೀಲ ಮತ್ತು ಡಾ. ಎಮ್. ಜಯಪ್ಪ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿಲಿದ್ದಾರೆ ಎಂದು ಮಹಿಳಾ ಸಬಲೀಕರಣ ಘಟಕದ ನಿರ್ದೇಶಕಿ ಪ್ರೋ ಮನಿಶಾ ಎಸ್ ನೇಸರಕರ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ