Latest

ಮಹಿಳೆಯರ ಮುಟ್ಟಿನ ರಜೆ ಅರ್ಜಿ; 24ರಂದು ವಿಚಾರಣೆಗೆ ಸುಪ್ರೀಂ ಅಸ್ತು

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಮಹಿಳಾ ನೌಕರರು ಹಾಗೂ ವಿದ್ಯಾರ್ಥಿನಿಯರಿಗೆ ಅವರು ಕೆಲಸ ಮಾಡುವ ಸಂಸ್ಥೆ, ಕಚೇರಿಗಳಲ್ಲಿ ಮುಟ್ಟಿನ ರಜೆ ನಿಯಮ ರೂಪಿಸಲು ಎಲ್ಲ ರಾಜ್ಯಗಳಿಗೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಫೆ.24ರಂದು ಕೈಗೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠದೆದುರು ದಿಲ್ಲಿ ನಿವಾಸಿ ಶೈಲೇಂದ್ರ ಮಣಿ ತ್ರಿಪಾಠಿ ಎಂಬುವವರ ಸಲ್ಲಿಸಿದ್ದ ಈ ಅರ್ಜಿ ಕುರಿತು ಪ್ರಸ್ತಾಪವಾಗಿ ಕೋರ್ಟ್ ವಿಚಾರಣೆಗೆ ಸಮ್ಮತಿಸಿತು.

ಜಪಾನ್, ಬ್ರಿಟನ್, ಇಂಡೋನೇಷ್ಯಾ ಸೇರಿದಂತೆ ಹಲವಾರು ದೇಶಗಳು ಅಲ್ಲಿನ  ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ನಿಗದಿಪಡಿಸಿದ್ದು ಇದನ್ನು ಭಾರತದಲ್ಲೂ ಜಾರಿಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆಯಲ್ಲದೆ, ತಾಯ್ತನ ಅನುಕೂಲ ಕಾಯ್ದೆ 1961ರ ಕಲಂ 14 ನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಪಾಲನೆ ಮಾಡುವಂತೆ ನಿರ್ದೇಶನ ನೀಡಲು ಅರ್ಜಿಯಲ್ಲಿ ಕೋರಲಾಗಿದೆ.

7ನೇ ವೇತನ ಆಯೋಗದ ವರದಿ ಜಾರಿ: ನಾಳೆಯೇ ಸರಕಾರದ ಬದ್ಧತೆ ಬಹಿರಂಗ

https://pragati.taskdun.com/7th-pay-commission/

*ಮೂರು ತಿಂಗಳು ದಣಿವರಿಯದೇ ಕೆಲಸ ಮಾಡಿ: ಬಿಜೆಪಿ ಕಾರ್ಯಕರ್ತರಿಗೆ ಸಿಎಂ ಕರೆ*

https://pragati.taskdun.com/bjp-rathayatrecm-basavaraj-bommimeetingvidhanasabha-election/

*ರಾಷ್ಟ್ರದ ರಕ್ಷಣಾ ವಲಯ ಬೇಡಿಕೆಯ ಪೂರೈಕೆಯಲ್ಲಿ ರಾಜ್ಯದ ಪಾಲು ಶೇ65%: ಸಿಎಂ ಬೊಮ್ಮಾಯಿ*

https://pragati.taskdun.com/aero-india-2023cm-basavaraj-bommairajanath-singh/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button