Belagavi NewsBelgaum NewsKannada NewsKarnataka NewsLatest

*ರಾಮರಾಜ್ಯದ ಪರಿಕಲ್ಪನೆಯೊಂದಿಗೆ ಕೆಲಸ ಮಾಡುತ್ತಿರುವೆ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

* ಚಂದನಹೊಸೂರು ಗ್ರಾಮದ ಕಲ್ಮೇಶ್ವರ ದೇವಸ್ಥಾನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ*

 ಪ್ರಗತಿವಾಹಿನಿ ಸುದ್ದಿ: ಕಳೆದ ಚುನಾವಣೆ ವೇಳೆ ಕೊಟ್ಟ ಮಾತಿನಂತೆ ಚಂದನ ಹೊಸೂರಿನಲ್ಲಿ 2 ಕೋಟಿ ರೂಪಾಯಿ ವೆಚ್ಚದಲ್ಲಿ ಕಲ್ಮೇಶ್ವರ ದೇವಸ್ಥಾನ ನಿರ್ಮಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. 

ಚಂದನಹೊಸೂರು ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನ ಕಟ್ಟಡ ನಿರ್ಮಾಣವಾಗಲಿದ್ದು, ಈಗಾಗಲೇ ಮೊದಲನೇ ಹಂತದಲ್ಲಿ 40 ಲಕ್ಷ ಹಾಗೂ ಎರಡನೇ ಹಂತದಲ್ಲಿ 40 ಲಕ್ಷ ಒಟ್ಟು 80 ಲಕ್ಷ ರೂ ಬಿಡುಗಡೆಗೊಂಡಿದ್ದು, ಇನ್ನುಳಿದ ಹಣ ಹಂತ ಹಂತವಾಗಿ ಬಿಡುಗಡೆಗೊಳ್ಳಲಿದೆ ಎಂದು ಹೇಳಿದರು. 

Home add -Advt

ಕ್ಷೇತ್ರದ ಜನರ ಆಶೋತ್ತರಗಳು ಹಾಗೂ ಭಾವನೆಗಳನ್ನು ಅರ್ಥಮಾಡಿಕೊಂಡು ಕೆಲಸ ಮಾಡುತ್ತಿರುವೆ. ಕೇವಲ ಚುನಾವಣೆ ಸಮಯದಲ್ಲಿ ಗ್ರಾಮಗಳಿಗೆ ನಾನು ಬರುವುದಿಲ್ಲ. ಗ್ರಾಮದ ಅಭಿವೃದ್ಧಿ ಕೆಲಸಗಳಿಗೆ ಸ್ಪಂದಿಸದ ಕೆಲ ಮಂದಿ ಮೋದಿ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ವೇಳೆ ಮತ ಕೇಳಲು ಬರುತ್ತಾರೆ. ನಾನು ಜನರೊಂದಿಗೆ ಸದಾ ಒಡನಾಟ ಇಟ್ಟಿಕೊಂಡಿರುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು. 

ಕ್ಷೇತ್ರದಲ್ಲಿರುವ 114 ಗ್ರಾಮಗಳಲ್ಲಿ 140 ಗುಡಿಗಳನ್ನು ನಿರ್ಮಿಸಿರುವೆ. ರಾಮರಾಜ್ಯದ ಪರಿಕಲ್ಪನೆಯೊಂದಿಗೆ ಕೆಲಸ ಮಾಡುತ್ತಿರುವೆ. ಅಧಿಕಾರ ಯಾವತ್ತೂ ಶಾಶ್ವತ ಅಲ್ಲ, ಜನರೊಂದಿಗೆ ಒಡನಾಟ ಮುಖ್ಯ. ದಿನದ 24 ಗಂಟೆಯೂ ಕೆಲಸ ಮಾಡುತ್ತಿರುವೆ, ಪುರುಷ ಪ್ರಧಾನ ಸಮಾಜ, ಪುರುಷ ಪ್ರಧಾನ ರಾಜಕೀಯದಲ್ಲಿ ಕರ್ನಾಟಕ ಸರ್ಕಾರದ ಸಚಿವ ಸಂಪುಟದ ಏಕೈಕ ಮಹಿಳಾ ಮಂತ್ರಿಯಾಗಿರುವೆ. ಇದಕ್ಕೆ ಜನರು ನೀಡಿದ ಬೆಂಬಲವೇ ಕಾರಣ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.  

ಕಾರ್ಯಕ್ರಮದಲ್ಲಿ ಹಣಬರಟ್ಟಿಯ ಬಸವಲಿಂಗ ಶಿವಾಚಾರ್ಯರು, ಮುತ್ನಾಳ ಕೇದಾರ ಶಾಖಾ ಪೀಠದ ಶ್ರೀ ಶಿವಾನಂದ ಶಿವಾಚಾರ್ಯರು, ಚಂದನಹೊಸೂರು-ಸುತಗಟ್ಟಿ ಸಿದ್ದಲಿಂಗ ಶಿವಾಚರ್ಯ ಮಹಾಸ್ವಾಮಿಗಳು, ಬಡೇಕೊಳ್ಳಿಮಠದ ಶಿವಯೋಗಿ ನಾಗೇಂದ್ರ ಮಹಾ ಸ್ವಾಮಿಗಳು, ವೇದಮೂರ್ತಿ ಮಹೇಶ ಸ್ವಾಮಿಗಳು, ಗಂಗಯ್ಯ ಸ್ವಾಮಿಗಳು, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಸದೆಪ್ಪ ತಾಂಡ್ಸಿ, ನಾಮದೇವ ಜೋಗನ್ನವರ, ಚಂದ್ರಕಾಂತ ಶಿಲ್ಪಿಕಾರ, ಕಲ್ಮೇಶ್ ಪಾರ್ವತಿ, ರಾಯಪ್ಪ ತವಗದ, ನಾಗಲಿಂಗ ಬಡಿಗೇರ್, ಅಡಿವೆಪ್ಪ ಪಾಟೀಲ, ಶಿವಲಿಂಗ ಕರನಣ್ಣವರ, ಕಲ್ಮೇಶ ತಾಂಡ್ಸಿ ಹಾಗೂ ದೇವಸ್ಥಾನ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.

Related Articles

Back to top button