ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಈ ವರ್ಷದ ಪರಿಸರ ದಿನಾಚರಣೆಯ ಥೀಮ್ ಬಯೋಡೈವರ್ಸಿಟಿ ಇದ್ದು, ಜಗತ್ತಿನಲ್ಲಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಜೀವವೈವಿದ್ಯತೆ ಒಂದರ ಮೇಲೊಂದು ಅವಲಂಬಿತವಾಗಿವೆ. ಭೂಮಿಯ ರಕ್ಷಣೆಯ ಜವಾಬ್ದಾರಿಯನ್ನು ಎಲ್ಲರೂ ಪಾಲಿಸಬೇಕು ಎಂದು ಕೇಂದ್ರ ರೇಲ್ವೆ ರಾಜ್ಯ ಸಚಿವ ಹಾಗೂ ಸಂಸ್ಥೆಯ ಚೇರಮನ್ ಸುರೇಶ ಅಂಗಡಿ ಕರೆ ನೀಡಿದರು.
ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಸಿವ್ಹಿಲ್ ಇಂಜನೀಯರಿಂಗ ವಿಭಾಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಯ ಅಂಗವಾಗಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಸಸಿಗಳನ್ನು ನೆಟ್ಟು ಮಾತನಾಡಿದರು.
ಬೆಳಗಾವಿಯ ಎನ್.ಐ.ಎಚ್. ವಿಜ್ಞಾನಿ ಡಾ. ಬಿ.ಕೆ. ಪುರಂದರ ವೆಬಿನಾರ ಮೂಲಕ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಿಸರ್ಗದಲ್ಲಿ ಜೀವಿಗಳ ವೈವಿದ್ಯತೆ ಬಗ್ಗೆ ತಿಳಿಸುತ್ತ ಸರ್ವರೂ ಭೂಮಿಯ ನೀರಿನ, ಮಣ್ಣಿನ ಹಾಗೂ ಕಾಡಿನ ಸಂರಕ್ಷಣೆ ಮಾಡಬೇಕೆಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ ಮಾತನಾಡಿ, ಸರ್ವರೂ ಭೂಮಿಯ ಸಂರಕ್ಷಣೆ ಮಾಡುವಲ್ಲಿ ಸಹಕರಿಸಬೇಕು. ಗಿಡಗಳನ್ನು ಬೆಳೆಸಿ ಪೋಷಿಸುವ ಮೂಲಕ ಪರಿಸರ ಸಂರಕ್ಷಣೆಯನ್ನು ಮಾಡಬೇಕೆಂದು ಹೇಳಿದರು.
ಕಾಲೇಜಿನ ವೇಸ್ಟ್ ವಾಟರ್ ಮ್ಯಾನೆಜಮೆಂಟ, ಹೆಲ್ತ್ & ಸೇಫ್ಟಿ ಇಂಜನೀಯರಿಂಗ್ ಮುಖ್ಯಸ್ಥ ಡಾ. ಬಿ.ಟಿ. ಸುರೇಶ ಬಾಬು ಮಾತನಾಡಿ, ಜಗತ್ತಿನಲ್ಲಿ ಎಲ್ಲ ಜೀವಿಗಳು ವೈವಿದ್ಯವಾಗಿ ಜೀವಿಸುತ್ತಿದ್ದು, ಆಹಾರಕ್ಕಾಗಿ ಒಂದನ್ನೊಂದು ಅವಲಂಬಿಸಿವೆ. ಈ ಪ್ರಕ್ರಿಯೆಯನ್ನು ಬಯೋಡೈವರ್ಸಿಟಿ ಎಂದು ಕರೆಯುತ್ತಾರೆ. ಇದರಿಂದ ಪರಿಸರದ ಸಂರಕ್ಷಣೆಯಾಗುತ್ತಿದ್ದು ಎಲ್ಲರೂ ಸುರಕ್ಷತೆಯ ಬಗ್ಗೆ ಕಾಳಜಿ ಹೊಂದಬೇಕೆಂದು ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷೆ ಮಂಗಲಾ ಅಂಗಡಿ, ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ, ಶ್ರದ್ಧಾ ಶೆಟ್ಟರ, ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ, ಡಾ. ಸಂಜಯ ಪೂಜಾರಿ, ಅಂಗಡಿ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ಸಂಗೀತಾ ದೇಸಾಯಿ, ಅಂಗಡಿ ಇಂಟರ್‌ನ್ಯಾಷನಲ್ ಸ್ಕೂಲಿನ ಮುಖ್ಯೋಪಾಧ್ಯಾಪಕಿ ಆಶಾ ರಜಪೂತ, ಅಂಗಡಿ ಸ್ಕೂಲ್ ಆಫ್ ಆರ್ಕಿಟೆಕ್ಚರನ ಪ್ರಾಚಾರ್ಯ ಪ್ರೊ. ಎಚ್.ಎಸ್. ಪಾಟೀಲ, ಪ್ರೊ. ಅಮರ ಬ್ಯಾಕೋಡಿ, ಪ್ರೊ. ನೂರಅಹ್ಮದ ಹೊಸಮನಿ, ದೈಹಿಕ ನಿರ್ದೇಶಕ ವಿಶಾಂತ ದಮೋಣೆ, ರಘುನಂದನ ಜೋಶಿ ಸೇರಿದಂತೆ ಎಲ್ಲ ಪ್ರಾಧ್ಯಾಪಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂರು ಸಸಿಗಳನ್ನು ನೆಟ್ಟರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ